ಕಾಸರಗೋಡು: ನಂಬರ್‍ಪ್ಲೇಟ್ ಮರೆಮಾಚಿ ಅಥವಾ ತೆಗೆದಿರಿಸಿ ಬೈಕ್ ಚಲಾಯಿಸುವವರ ಪತ್ತೆಗೆ ಪೊಲೀಸ್ ಇಲಾಖೆ ಕ್ರಮ ಜರಗಿಸುತ್ತಿರುವದರ ಜತೆಗೆ ಮೋಟಾರು ವಾಹನ ಇಲಾಖೆ 'ರೇಸ್ ಆಪರೇಶನ್' ಎಂಬ ಕಾರ್ಯಾಚರಣೆಗೆ ಮುಂದಾಗಿದೆ.
ನಂಬರ್ ಪ್ಲೇಟ್ ರಹಿತ ಸಂಚಾರಕ್ಕಾಗಿ ಹೊಸದುರ್ಗ ನಯಾಬಜಾರ್‍ನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹೊಸದುರ್ಗ ಪಾರಂಪಳ್ಳಿ ನಿವಾಸಿ ಜೆ.ಪಿ ಜಾಬಿರ್ ಎಂಬಾತನನ್ನು ಬಂಧಿಸಿದ್ದಾರೆ. ಬೈಕ್ ಗುರುತು ಪತ್ತೆಹಚ್ಚದಿರುವಂತೆ ನಂಬರ್ ಪ್ಲೇಟ್ ತೆಗೆದಿರಿಸಿ ಚಲಾಯಿಸುತ್ತಿರುವ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಸರಗಳ್ಳತನ, ಡಿಕ್ಕಿಯಾಗಿಸಿ ಅಥವಾ ಪೊಲೀಸರು ಸೂಚನೆ ನೀಡಿದರೂ ನಿಲ್ಲಿಸದೆ ಪರಾರಿಯಾಗುತ್ತಿರುವುದು, ಅಜಾಗರೂಕತೆ ಹಾಗೂ ಅತಿಯಾದ ವೇಗದ ಚಲಾವಣೆಗಳಲ್ಲೂ ಇಂತಹ ಬೈಕ್‍ಗಳನ್ನು ಬಳಸಲಾಗುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

