ಮಧೂರು: ಕೂಡ್ಲು ಗೋಪಾಲಕೃಷ್ಣ ಪ್ರೌಢ ಶಾಲೆಯಲ್ಲಿ ಶಾಸಕರ ನಿಧಿಯಿಂದ ನಿರ್ಮಿಸಲಾದ ಪಾಕ ಶಾಲೆಯ ಉದ್ಘಾಟನೆಯನ್ನು ಶಾಸಕ ಎನ್ .ಎ.ನೆಲ್ಲಿಕುನ್ನು ನೆರವೇರಿಸಿದರು. ಶಾಲೆಯಲ್ಲಿ ನಡೆ ಸಮಾರಂಭದಲ್ಲಿ ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಉಮೇಶ್ ಗಟ್ಟಿ, ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯ ಸುಕುಮಾರ ಕುದ್ರೆಪಾಡಿ, ಗ್ರಾಪಂ ಸದಸ್ಯೆ ಕೆ.ರಾಧಾ, ಶಾಲಾ ಪ್ರಬಂಧಕ ಕೆ .ಜಿ ಶ್ಯಾನುಭಾಗ್, ರಕ್ಷಕ ಶಿಕ್ಷಕ ಸಂಘಧ ಅಧ್ಯಕ್ಷ ಗಣೇಶ್ ಪಾರಕಟ್ಟೆ, ಮಾತೃಸಂಘ ಅಧ್ಯಕ್ಷೆ ಕೆ.ವಸಂತಿ ,ಬಿಜೆಪಿ ಮಧೂರ್ ಪಂಚಾಯಿತಿ ಸಮಿತಿ ಅಧ್ಯಕ್ಷ ಕೆ.ಚಂದ್ರಹಾಸ ,ಮುಸ್ಲಿಂ ಲೀಗ್ ಮಂಡಲಕಾರ್ಯದರ್ಶಿ ಅಬ್ದುಲ್ ರಹಮಾನ್ ಪಟ್ಲ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎನ್.ಶ್ರೀಹರಿ ಸ್ವಾಗಿತಿಸಿದರು. ಶಿಕ್ಷಕರಾದ ಕೆ.ವೇಣುಗೋಪಾಲ, ಎಂ.ಹರ್ಷ ಕುಮಾರ್ ಕಾರ್ಯಕ್ರಮ ನಿರೂಪಿಶಿದರು. ಸ್ಟಾಫ್ ಸೆಕ್ರೇಟರಿ ವಂದಿಸಿದರು.

