ಕೊಟ್ಟಾಯಂ: ಚಲನಚಿತ್ರ ಮತ್ತು ಧಾರಾವಾಹಿ ನಟ ವಿಪಿ ಖಾಲಿದ್ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಹೃದಯಾಘಾದಿಂದ ಮೃತರಾದರೆಂದು ತಿಳಿದುಬಂದಿದೆ. ವೈಕಂನಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಇವರು ಫೋರ್ಟ್ ಕೊಚ್ಚಿಯ ಚುಲ್ಲಿಕಲ್ ನವರು.
ಇಂದು ಬೆಳಗ್ಗೆ ಉಪಾಹಾರ ಮುಗಿಸಿ ಶೌಚಕ್ಕೆ ತೆರಳಿದ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ. ಸಹೋದ್ಯೋಗಿಗಳು ಹೋಗಿ ನೋಡಿದಾಗ ಬಹಳ ಹೊತ್ತಿನವರೆಗೆ ಕಾಣಿಸಲಿಲ್ಲ. ಬಳಿಕ ಅವರನ್ನು ವೈಕಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನಾಟಕಗಳ ಮೂಲಕ ಚಿತ್ರರಂಗ ಪ್ರವೇಶಿಸಿದ ಖಾಲಿದ್ ಕೊಚ್ಚಿನ್ ನಾಗೇಶ್ ಎಂದೇ ಮೊದಲು ಗುರುತಿಸಿಕೊಂಡಿದ್ದರು. ಅಲೆಪ್ಪಿ ಥಿಯೇಟರ್ಸ್ ಮೂಲಕ ಅವರು ರಂಗಭೂಮಿಗೆ ಪ್ರವೇಶಿಸಿದರು. 1973 ರಲ್ಲಿ ಅಲೆಪ್ಪಿ ಥಿಯೇಟರ್ಸ್‌ನಿಂದ ಖಾಲಿದ್ ಅವರು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಅವರು ಪೆರಿಯಾರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಅನೇಕ ಚಲನಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮಳವಿಲ್ ಮನೋರಮದ ತಟ್ಟಿಮುಟ್ಟಿ ಧಾರಾವಾಹಿಯಲ್ಲಿ ಇತ್ತೀಚೆಗೆ ಗುರುತಿಸಿಕೊಂಡಿದ್ದರು.




