HEALTH TIPS

ಮನೆಕೆಲಸಕ್ಕಾಗಿ ವಿದೇಶಕ್ಕೆ ಯುವತಿಯರ ರವಾನೆ: ಐಸಿಸ್‍ಗೆ ಹಸ್ತಾಂತರ ಶಂಕೆ

                 ಕಾಸರಗೋಡು: ವಿದೇಶದಲ್ಲಿ ಮನೆ ಕೆಲಸಕ್ಕಾಗಿ ಕಾಸರಗೋಡು  ಜಿಲ್ಲೆಯ ಯುವತಿಯರನ್ನು ಕರೆದೊಯ್ದು, ನಂತರ ಇವರನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್‍ಗೆ ಹಸ್ತಾಂತರಿಸುವ ಬಗ್ಗೆ ರಾಷ್ಟ್ರೀಯ ತನಿಖಾ ಏಜನ್ಸಿ(ಎನ್.ಐ.ಎ)ಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಿದೆ.

               ಗಲ್ಫ್ ರಾಷ್ಟ್ರ ಕೇಂದ್ರೀಕರಿಸಿ ಯುವತಿಯರನ್ನು ಮನೆಕೆಲಸಗಳಿಗೆ ರವಾನಿಸಲು ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಎನ್‍ಐಎಗೆ ಮಾಹಿತಿ ಲಭಿಸಿದ್ದು, ಈತನ ಪತ್ತೆಗೆ ಬಲೆ ಬೀಸಿದೆ. ಎರ್ನಾಕುಳಂನ ನೇಮಕಾತಿ ಸಂಸ್ಥೆಯೊಂದು ಮಾವೇಲಿಕ್ಕರ ನಿವಾಸಿ ಯುವತಿಯನ್ನು ಕುವೈತ್‍ಗೆ ತಲುಪಿಸಿದ್ದು, ಅಲ್ಲಿಂದ ಸಿರಿಯಾಕ್ಕೆ ರವಾನಿಸಿದೆ. ತಂಡದ ವಶದಲ್ಲಿದ್ದ ಈ ಯುವತಿ ತಪ್ಪಿಸಿ ಊರಿಗೆ ಬಂದಿದ್ದು,  ಬೆಚ್ಚಿಬೀಳಿಸುವ ಮಾಹಿತಿಯನ್ನು ತನಿಖಾ ತಂಡಕ್ಕೆ ನೀಡಿದ್ದಾಳೆ. ವಿದೇಶದಲ್ಲಿ ಮನೆಕೆಲಸಕ್ಕೆ ಯುವತಿಯರು ಬೇಕಾಗಿದ್ದು, 50ಸಾವಿರ ರೂ. ವರೆಗೆ ವೇತನ ನೀಡುವುದಾಗಿ ಜಾಹೀರಾತು ನೀಡಲಾಗುತ್ತದೆ. ಗಲ್ಫ್ ರಾಜ್ಯಕ್ಕೆ ತಲುಪುತ್ತಿದ್ದಂತೆ ಅಲ್ಲಿಂದ ಹತ್ತು ಲಕ್ಷಕ್ಕೂ ಹೆಚ್ಚಿನ ಮೊತ್ತಕ್ಕೆ ಯುವತಿಯರನ್ನು ಸೊರಿಯಾದ ಐಸಿಸ್ ಕೇಂದ್ರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಯುವತಿ ತನಿಖಾ ತಂಡಕ್ಕೆ ತಿಳಿಸಿದ್ದಾಳೆ. ಯುವತಿ ನೀಡಿದ ದೂರಿನನ್ವಯ ದೂರು ದಾಖಲಾಗಿದ್ದೂ, ಪ್ರಕರಣ ಎನ್‍ಐಎಗೆ ವಹಿಸದಿರುವುದರಿಂದ ತನಿಖೆಗೆ ವಿಳಂಬವಾಗುತ್ತಿದೆ. ಈ ಮಧ್ಯೆ ತಳಿಪರಂಬ ನಿವಾಸಿ ಮಜೀದ್ ಎಂಬಾತನಿಗೆ ಕೃತ್ಯದಲ್ಲಿ ಕೈವಾಡವಿರುವ ಬಗ್ಗೆ ಗುಮಾನಿ ವ್ಯಕ್ತವಾಗಿದ್ದು, ಈತನ ಪತ್ತೆಗೆ ತನಿಖಾ ಏಜನ್ಸಿ ಕ್ರಮ ಆರಂಭಿಸಿದೆ. ಖಾಸಗಿ ನೇಮಕಾತಿ ಮೂಲಕ ಮಾನವ ಕಳ್ಳ ಸಾಗಾಟ ನಡೆಯುತ್ತಿದ್ದು, ಹಣದ ಆಮಿಷಕ್ಕೊಳಗಾಗಿ ಹಲವರು ವಿದೇಶಕ್ಕೆ ತೆರಳಿದ್ದು, ಇವರ ಬಗ್ಗೆಮಾಹಿತಿ ಕಲೆಹಾಕಬೇಕಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries