ನವದೆಹಲಿ : ಒಳಚರಂಡಿ ಹಾಗೂ ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭ 2017ರಿಂದ 347ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ಮಂಗಳವಾರ ಹೇಳಿದೆ.
0
samarasasudhi
ಜುಲೈ 19, 2022
ನವದೆಹಲಿ : ಒಳಚರಂಡಿ ಹಾಗೂ ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭ 2017ರಿಂದ 347ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ಮಂಗಳವಾರ ಹೇಳಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ವಿರೇಂದ್ರ ಕುಮಾರ್, 2017ರಲ್ಲಿ 92, 2018ರಲ್ಲಿ 67, 2019ರಲ್ಲಿ 116, 2020ರಲ್ಲಿ 19, 2021ರಲ್ಲಿ 36, 2022ರಲ್ಲಿ 17 ಇಂತಹ ಸಾವುಗಳು ಸಂಭವಿಸಿವೆ ಎಂದರು.
ಮಲಗುಂಡಿಗಳಲ್ಲಿ ಅತ್ಯಧಿಕ ವಿಷಾನಿಲ ಇರುವುದರಿಂದ ಅದರೊಳಗೆ ಇಳಿಯುವುದಕ್ಕೆ ಸುಪ್ರೀಂ ಕೋರ್ಟ್ 2014ರಲ್ಲಿ ನಿಷೇಧ ವಿಧಿಸಿತ್ತು.
ಆದರೆ, ಕಳೆದ ವರ್ಷ ಪ್ರಕಟವಾದ ವರದಿಯಲ್ಲಿ ಉತ್ತರಪ್ರದೇಶದಲ್ಲಿ ಗರಿಷ್ಠ ಅಂದರೆ, 52 ಸಾವಿನ ಪ್ರಕರಣಗಳು ವರದಿಯಾಗಿವೆ. ತಮಿಳುನಾಡಿನಲ್ಲಿ 43, ದಿಲ್ಲಿಯಲ್ಲಿ 36, ಮಹಾರಾಷ್ಟ್ರದಲ್ಲಿ 34 ಹಾಗೂ ಗುಜರಾತ್, ಹರ್ಯಾಣದಲ್ಲಿ ತಲಾ 31 ಸಾವಿನ ಪ್ರಕರಣಗಳು ವರದಿಯಾಗಿವೆ.