ಮಂಜೇಶ್ವರ: ಭಾರೀ ಮಳೆಯೊಂದಿಗೆ ಬೀಸಿದ ಗಾಳಿಗೆ ತೆಂಗಿನ ಮರವೊಂದು ಉರುಳಿ ಬಿದ್ದು ಮನೆ ಧ್ವಂಸಗೊಂಡಿದೆ. ಬಂಗ್ರಮಂಜೇಶ್ವರದ ಬಾವಹಾಜಿ ಎಂಬವರ ಒಡೆತನದ ಮನೆಯ ಮೇಲೆ ಬೃಹತ್ ತೆಂಗಿನ ಮರವೊಂದು ಬಿದ್ದಿದ್ದು, ಆಘಾತದಲ್ಲಿ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದಿದೆ. ವಿದ್ಯುತ್ ತಂತಿಯ ಮೇಲೆ ತೆಂಗಿನಮರ ಬಿದ್ದ ಪರಿಣಾಮ ಮನೆಯ ಮೇಲ್ಭಾಗ ಸ್ಪೋಟಗೊಂಡ ಸ್ಥಿತಿಯಲ್ಲಿದೆ.
ವಿದ್ಯುತ್ ಲೈನ್ ಅಸ್ತವ್ಯಸ್ಥತೆಯಿಂದ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿವೆ. ಆ ವೇಳೆ ಬಾವ ಹಾಜಿ ಮತ್ತವರ ಕುಟುಂಬ ಸಂಬಂಧಿಕರ ಮನೆಯಲ್ಲಿದ್ದರು. ಅದೃಷ್ಟವಶಾತ್ ಯಾವ ಜೀವಹಾನಿಯಾಗದೆ ಪಾರಾಗಲಾಗಿದೆ. ಸುಮಾರು ನಾಲ್ಕು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಮನೆಯ ಮಾಲೀಕರು ತಿಳಿಸಿದ್ದಾರೆ. ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆ, ಗಾಳಿಗೆ ಹಲವೆಡೆ ಅಪಾರ ಹಾನಿ ಸಂಭವಿಸಿದೆ.

.jpg)
.jpg)
