HEALTH TIPS

ಮಲಯಾಳ ಕಲಿಯುವ ಮೂಲಕ ಅವಕಾಶಗಳನ್ನು ಪಡೆಯಬಹುದಾಗಿದೆ!: ಸಚಿವ ಅಹಮ್ಮದ್ ದೇವರ್ಕೋವಿಲ್

 

          ಮಂಜೇಶ್ವರ: ಮಲಯಾಳ ಅಧ್ಯಯನದ ಮೂಲಕ ಭಾಷಾ ಅಲ್ಪಸಂಖ್ಯಾತರು ಕೇರಳದಲ್ಲಿ ಉದ್ಯೋಗ ಸೇರಿದಂತೆ ಕೈತಪ್ಪಿ ಹೋಗುವ ಅವಕಾಶಗಳನ್ನು ಪಡೆಯಬಹುದೆಂದು ರಾಜ್ಯ ಬಂದರು, ಮ್ಯೂಸಿಯಂ ಖಾತೆಗಳ ಸಚಿವ ಅಹಮ್ಮದ್ ದೇವರ್ಕೋವಿಲ್ ತಿಳಿಸಿದರು. ಪ್ರಸ್ತುತ ಜಾರಿಯಲ್ಲಿರುವ ಕನ್ನಡಿಗೆ ಕೋಟಾಕ್ಕೆ ಯಾವುದೇ ತೊಂದರೆಯಾಗದಂತೆ ಮಂಜೇಶ್ವರ ವ್ಯಾಪ್ತಿಯಲ್ಲಿ ಆಸಕ್ತರಿಗೆ ಮಲೆಯಾಳ ಕಲಿಕೆಗೆ ಅವಕಾಶ ನೀಡಲಾಗಿದೆ. ಸಂವಿಧಾನದ 8 ನೇ ಶೆಡ್ಯೂಲ್ ವ್ಯಾಪ್ತಿಗೆ ಒಳಪಡುವ ಕೇರಳದಲ್ಲಿ ಮಲಯಾಳ ಭಾಷೆಯನ್ನು ಉತ್ತೇಜಿಸುತ್ತಿರುವ ಆಡಳಿತ ಭಾಷಾ ಅಭಿವೃದ್ಧಿ ಸಮಿತಿಯನ್ನು ಶ್ಲಾಘಿಸಿದರು. 

                ಮೀಯಪದವಲ್ಲಿ ಭಾನುವಾರ ನಡೆದ ಮಲಯಾಳಂ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

           ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಸುಕ್ಕಾಸ್ ವಸ್ತ್ರಾಲಯದ ವತಿಯಿಂದ ನೀಡಲಾದ 500 ಛತ್ರಿಗಳನ್ನು ವರ್ಕಾಡಿ ಪಂಚಾಯತಿ ಅಧ್ಯಕ್ಷೆ ಭಾರತಿ ಅವರು ನೂತನ ವಿದ್ಯಾರ್ಥಿಗಳಿಗೆ ವಿತರಿಸಿದರು. ಹಳೆ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳನ್ನು ಈ ಸಂದರ್ಭ ಅಭಿನಂದಿಸಿ ಗೌರವಿಸಲಾಯಿತು. ಹತ್ತನೇ ತರಗತಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕದೊಂದಿಗೆ ತೇರ್ಗಡೆಯಾದ ದೇವಪ್ರಿಯಾಳನ್ನು ವಿಶೇಷವಾಗಿ ಅಭಿನಂದಿಸಲಾಯಿತು.  ಪಂಚಾಯತಿ ಕಾರ್ಯದರ್ಶಿ ಮಣಿಕುಟ್ಟನ್, ಲೋಕೇಶ್ ಚಿನಾಲ, ಪ್ರಭಾಕg ಚೌಟ, ಟಿ.ಎ.ಮೂಸಾ, ಕಂಚಿಲ ಮೊಹಮ್ಮದ್, ಅಬ್ಬಾಸ್ ವಾನಂದೆ, ಮಾಧವ ಬೆಳ್ಳೂರು,  ವಿನಾಯಕನ್ ಮಾಸ್ತರ್, ಮಜೀದ್ ವರ್ಕಾಡಿ, ಅಬ್ದುಲ್ಲ, ಮಜೀದ್ ಧರ್ಮನಗರ, ಅಲಿ ಎ, ಖಾದರ್, ಅಲಿ ಮಜೀರ್ಪಳ್ಳ, ವಹೀದ್ ಕುಡ, ಅಶ್ರಫ್ ಬಡಾಜೆ, ಸುಧಾ ಟೀಚರ್, ಬಾಪುಂಞÂ ಮೀಯಪದವು, ಹನೀಫ್ ಬಾಳ್ಯೂರು,  ಅಬ್ಬಾಸ್, ಕೆ.ಎಫ್.ಇಕ್ಬಾಲ್, ಜಬ್ಬಾರ್ ಪಿ.ಎ., ಸಿರಾಜ್ ಮಾಸ್ತರ್, ಮೊಯ್ತೀನ್ ಅಬ್ಬಾ ಮೊದಲಾದವರು ವಿವಿಧ ಅಧಿವೇಶನದಲ್ಲಿ ಮಾತನಾಡಿದರು. ಅಧ್ಯಕ್ಷ ಎಂ.ಕೆ.ಅಲಿ ಮಾಸ್ತರ್ ಸ್ವಾಗತಿಸಿ ವಂದಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries