HEALTH TIPS

ಕಾಡೊಳಗೆ ಅತಿಕ್ರಮಿಸಿ ವಿಡಿಯೋ ಚಿತ್ರೀಕರಣ; ಇನ್ನೂ ಪತ್ತೆಯಾಗದ ಮಹಿಳಾ ಯೂಟ್ಯೂಬರ್: ಕಾರು ವಶಕ್ಕೆ

    

                  ಕೊಲ್ಲಂ: ಅರಣ್ಯದಲ್ಲಿ ಅತಿಕ್ರಮ ಪ್ರವೇಶ ಮಾಡಿ ವಿಡಿಯೋ ಚಿತ್ರೀಕರಣ ಮಾಡಿದ್ದ ಯೂಟ್ಯೂಬರ್ ಅಮಲಾ ಅನು ಅವರ ಕಾರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಪೋತನ್ ಕೋಟ್‍ನಲ್ಲಿರುವ ಅವರ ಸ್ನೇಹಿತರ ಮನೆಯಿಂದ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಮಲಾ ಅನು ಈ ಮನೆಯಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಸುದ್ದಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದರೂ ಪತ್ತೆಯಾಗದೆ ಕಾರಿನೊಂದಿಗೆ ತೆರಳಿದರು. 

                ಅಮಲಾ ಕೊಚ್ಚಿಯಲ್ಲಿದ್ದಾಳೆ ಎಂಬ ಮಾಹಿತಿ ಮೇರೆಗೆ ಇಲ್ಲಿನ ಆಕೆಯ ಸ್ನೇಹಿತೆಯ ಮನೆಯಲ್ಲಿ ಹುಡುಕಾಟ ನಡೆಸಲಾಗಿತ್ತಾದರೂ ಆಕೆ ಪತ್ತೆಯಾಗಿಲ್ಲ. ಅಮಲಾಳಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಅಮಲಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‍ನಲ್ಲಿ ವಿರೋಧಿಸುವುದಾಗಿ ಅರಣ್ಯ ಇಲಾಖೆಯೂ ಹೇಳಿದೆ. ಅಮಲಾಗೆ ಜಾಮೀನು ನೀಡುವುದನ್ನು ವಿರೋಧಿಸಿ ಅರಣ್ಯ ಇಲಾಖೆಯೂ ಹೈಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದೆ.

                 ಅರಣ್ಯಕ್ಕೆ ನುಗ್ಗಿ ವೀಡಿಯೋ ಚಿತ್ರೀಕರಿಸಿದ ಪ್ರಕರಣದಲ್ಲಿ ಅರಣ್ಯ ಇಲಾಖೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರೂ ಹಾಜರಿರಲಿಲ್ಲ. ಅಮಲಾ ವಿರುದ್ಧ ಅರಣ್ಯದಲ್ಲಿ ಅತಿಕ್ರಮ ಪ್ರವೇಶ ಮಾಡಿ ಕಾಡಾನೆಗಳ ದೃಶ್ಯಾವಳಿಗಳನ್ನು ದಾಖಲಿಸಿಕೊಂಡ ಪ್ರಕರಣ ದಾಖಲಿಸಲಾಗಿದೆ. ಜಾಮೀನು ರಹಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries