ತಿರುವನಂತಪುರ: ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬದ ಸದಸ್ಯರ ಮೇಲೆ ಸರ್ಕಾರ ಕ್ರೌರ್ಯ ತೋರಿದೆ. ಸರ್ಕಾರ ಪರಿಹಾರ ಮೊತ್ತ ನೀಡುವಂತೆ ಸೂಚಿಸಿದ್ದರೂ ನೀಡಿಲ್ಲ.
3717 ಕುಟುಂಬಗಳಿಗೆ ಇನ್ನೂ ಪರಿಹಾರ ನೀಡಬೇಕಿದೆ.
ತಾಂತ್ರಿಕ ಕಾರಣದಿಂದ ಸರ್ಕಾರ ಪರಿಹಾರ ನೀಡಲು ವಿಳಂಬ ಮಾಡುತ್ತಿದೆ. ಹೆಚ್ಚಾಗಿ ಬ್ಯಾಂಕ್ ಖಾತೆಗೆ ಸಂಬಂಧಿಸಿದ ದೋಷಗಳ ಬಗ್ಗೆ ಹೇಳಲಾಗಿದೆ. ಆದರೆ ಬ್ಯಾಂಕ್ ಸಂಬಂಧಿ ದೋಷಗಳನ್ನು ಸರಿಪಡಿಸಿಕೊಂಡವರ ಖಾತೆಗೂÉ ಇನ್ನೂ ಹಣ ಬಂದಿಲ್ಲ ಎನ್ನುತ್ತಾರೆ ಮೃತರ ಕುಟುಂಬಸ್ಥರು.
ಕೊರೊನಾ ಸೋಂಕಿತರು ಸಾವನ್ನಪ್ಪಿದ ನಂತರ ಒಂದು ತಿಂಗಳೊಳಗೆ 5,000 ರೂ.ಗಳನ್ನು ಪಾವತಿಸಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.ಆ ಮೊತ್ತವನ್ನು ಕಂದಾಯ ಇಲಾಖೆಯ ಅಧೀನದಲ್ಲಿರುವ ವಿಪತ್ತು ನಿರ್ವಹಣಾ ಇಲಾಖೆಯು ಮಂಜೂರು ಮಾಡುತ್ತದೆ. ಪರಿಹಾರ ಮೊತ್ತವನ್ನು ತ್ವರಿತವಾಗಿ ಪಾವತಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಬಳಿಕ ಪ್ರಮಾದ ಉಂಟಾಗಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಲಭಿಸದ ಪರಿಹಾರ ಮೊತ್ತ: 3717 ಕುಟುಂಬಗಳು ಅನಿಶ್ಚಿತತೆಯಲ್ಲಿ
0
ಆಗಸ್ಟ್ 26, 2022
Tags





