HEALTH TIPS

ಭಾರತದಲ್ಲಿ ಲಂಪಿ ಚರ್ಮದ ಕಾಯಿಲೆಯ ಆತಂಕ: 7000ಕ್ಕೂ ಅಧಿಕ ಜಾನುವಾರುಗಳ ಬಲಿ

 ಭಾರತದಲ್ಲಿ ಜಾನುವಾರುಗಳಿಗೆ ಲಂಪಿ ಚರ್ಮ ರೋಗ ಕಾಣಿಸಿಕೊಳ್ಳುತ್ತಿದ್ದು ಪಶು ಸಾಕಣೆ ಮಾಡುತ್ತಿರುವವರಿಗೆ ಆತಂಕ ಎದುರಾಗಿದೆ. ಇದುವರೆಗೆ 7, 300 ಪಶುಗಳು ಈ ಕಾಯಿಲೆ ಬಲಿಯಾಗಿವೆ. ಈಗಾಗಲೇ 8 ರಾಜ್ಯಗಳಲ್ಲಿ ಲಂಪಿ ಸ್ಕಿನ್‌ ಡಿಸೀಜ್‌ ಕಂಡು ಬಂದಿದೆ.

ಲಂಪಿ ಸ್ಕಿನ್ ಡಿಸೀಜ್‌ ಅನ್ನು ಚರ್ಮಗಂಟು ರೋಗ ಅಥವಾ ಚರ್ಮ ಮುದ್ದೆ ರೋಗ ಎಂದು ಕೂಡ ಕರೆಯಲಾಗುವುದು. ಪಂಜಾಬ್‌ನಲ್ಲಿ 3,359 ಹಸುಗಳು ಈ ಕಾಯಿಯಿಂದಾಗಿ ಮೃತಪಟ್ಟಿವೆ. ರಾಜಸ್ಥಾನದಲ್ಲಿ 2,111, ಗುಜರಾತ್‌ನಲ್ಲಿ 1,679, ಜಮ್ಮು ಮತ್ತು ಕಾಶ್ಮೀರದಲ್ಲಿ 62, ಹಿಮಾಚಲ ಪ್ರದೇಶದಲ್ಲಿ 38, ಉತ್ತರಾಖಂಡದಲ್ಲಿ 36, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ29 ಹಸುಗಳು ಈ ಕಾಯಿಲೆಯಿಂದ ಮೃತಪಟ್ಟಿವೆ.


ಲಂಪಿ ಸ್ಕಿನ್ ಡಿಸೀಜ್‌ ಹೇಗೆ ಹರಡುತ್ತದೆ?

ಸೊಳ್ಳೆಗಳು ಹಾಗೂ ಜಾನುವಾರುಗಳ ಮೇಲೆ ರಕ್ತ ಹೀರಲು ಕೂರುವ ಕೀಟಗಳಿಂದ ಹರಡುತ್ತದೆ. ರೋಗವಿರುವ ಪ್ರಾಣಿಗೆ ಕಚ್ಚಿದ ಸೊಳ್ಳೆ ಅಥವಾ ಕೀಟ ಮತ್ತೊಂದು ಜಾನುವಾರುವಿಗೆ ಕಚ್ಚಿದಾಗ ಈ ರೋಗ ಹರಡುವುದು.

ಜಾನುವಾರುಗಳಲ್ಲಿ LSD ಲಕ್ಷಣಗಳು

* ಜಾನುವಾರುಗಳ ಚರ್ಮ ತ್ವಚೆ ಗಂಟು ಗಂಟಾಗಿ ಆಗುವುದು ಅಂದ್ರೆ ಚರ್ಮ ಮುದ್ದೆ-ಮುದ್ದೆಯಾಗುವುದು

* ಜ್ವರ

* ಜಾನುವಾರಗಳಿಗ ನಡೆದಾಡಲು ಕಷ್ಟವಾಗುವುದು

ಲಂಪಿ ಚರ್ಮ ಕಾಯಿಲೆ ಮನುಷ್ಯರಿಗೆ ಹರಡುವುದೇ?

ಲಂಪಿ ಚರ್ಮ ಕಾಯಿಲೆ ಜಾನುವಾರುಗಳಿಗೆ ವೇಗವಾಗಿ ಹರಡುತ್ತದೆ, ಆದರೆ ಇದು ಮನುಷ್ಯರಿಗೆ ಹರಡುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಕಾಯಿಲೆ ಬಂದಿರುವ ಜಾನುವಾರುಗಳ ಆರೈಕೆ ಮಾಡಿದರೂ ಮನುಷ್ಯರಿಗೆ ಹರಡುವುದಿಲ್ಲ.

ಜಾನುವಾರುಗಳ ಮಾಲೀಕರಿಗೆ ಸಂಕಷ್ಟ

ಲಂಪಿ ಸ್ಕಿನ್‌ ಕಾಯಿಲೆಯಿಂದಾಗಿ ಜಾನುವಾರು ಸಾವನ್ನಪ್ಪುತ್ತಿರುವುದು ಪಶು ಸಂಗೋಪನೆಯಿಂದಲೇ ಜೀವನ ನಡೆಸುತ್ತಿರುವವರಿಗೆ ದೊಡ್ಡ ಹೊಡೆತವಾಗಿದೆ.

ಲಂಪಿ ಸ್ಕಿನ್ ಕಾಯಿಲೆ ತಡೆಗಟ್ಟುವುದು ಹೇಗೆ?

ಸೊಳ್ಳೆ, ನುಸಿ, ಕೀಟಗಳು, ಉಣ್ಣೆ ಇವುಗಳು ಜಾನುವಾರುಗಳಿಗೆ ಕಚ್ಚದಂತೆ ಎಚ್ಚರವಹಿಸಬೇಕು.

* ಕೀಟಗಳನ್ನು ದೂರವಿಡಲು ಕೀಟನಿರೋಧಕ ಬಳಸಬೇಕು.

* ರೋಗ ಇರುವ ದನಗಳನ್ನು ಇತರ ದನಗಳಿಂದ ಬೇರ್ಪಡಿಸಿ.

* ಕಾಯಿಲೆ ಕಂಡು ಬಂದ ತಕ್ಷಣ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿ.

* ಗಾಯಗಳನ್ನು ನುಸಿ ಕೂರದಂತೆ ಡೆಟಾಲ್ ಅಥವಾ ಸೋಂಕು ನಿವಾರಕ ದ್ರಾವಣ ಬಳಸಿ ಸ್ವಚ್ಛಗೊಳಿಸಬೇಕು.

* ಜಾನುವಾರುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಸಿರು ಮೇವು ಹಾಕ.

* ಈ ಕಾಯಿಲೆ ಇರುವ ಹಸುಗಳಿಗೆ ಸೂಕ್ತ ಚಿಕಿತ್ಸೆ ಸಿಕ್ಕರೆ 15-20 ದಿನಗಳಲ್ಲಿ ಗುಣಮುಖವಾಗುತ್ತವೆ.


 

 

 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries