ತಿರುವನಂತಪುರ: ಆರೆಸ್ಸೆಸ್ ಜೊತೆಗಿನ ಒಡನಾಟದ ಬಗ್ಗೆ ನನಗೆ ಸದಾ ಹೆಮ್ಮೆ ಇದೆ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
ಸಂಘದೊಂದಿಗೆ ಬಹಳ ಕಾಲದಿಂದ ನಿಕಟ ಸಂಪರ್ಕ ಹೊಂದಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲಿ ಆರ್ ಎಸ್ ಎಸ್ ನ ಚಟುವಟಿಕೆಗಳು ಅತ್ಯಮೂಲ್ಯವಾಗಿವೆ ಎಂದು ಅವರು ಹೇಳಿದರು. ಮಾಧ್ಯಮವೊಂದಕ್ಕೆ ಇಂದು ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
1986 ರಿಂದ ಸಂಘದೊಂದಿಗೆ ನಿಕಟ ಸಂಬಂಧ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆಯ ಕಾರ್ಯವೈಖರಿಯನ್ನು ಅಪಾರವಾಗಿ ಮೆಚ್ಚಿಕೊಂಡಿರುವೆ. ಸಮಾಜದ ಕಟ್ಟಕಡೆಯವರನ್ನು ಸಮಾಜದ ಮುಂಚೂಣಿಗೆ ತರಲು ಸಂಘ ನಡೆಸುತ್ತಿರುವ ವಿದ್ಯಾಲಯ ಯೋಜನೆಗಳು ಶ್ಲಾಘನೀಯ. ಯುವ ಪೀಳಿಗೆಗೆ ಶಿಕ್ಷಣ ನೀಡುವ ಮೂಲಕ ಆರ್‍ಎಸ್‍ಎಸ್ ಉದಾತ್ತ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಆರೆಸ್ಸೆಸ್ ಜೊತೆಗಿನ ಒಡನಾಟದ ಬಗ್ಗೆ ಸದಾ ಹೆಮ್ಮೆಪಡುತ್ತೇನೆ ಎಂದಿರುವರು.
ಮಾಜಿ ಸಚಿವ ಕೆ.ಟಿ.ಜಲೀಲ್ ಅವರ ‘ಆಜಾದ್ ಕಾಶ್ಮೀರ’ ಹೇಳಿಕೆಯನ್ನೂ ಅವರು ಟೀಕಿಸಿದರು. ಕೆ.ಟಿ.ಜಲೀಲ್ ಅವರ ಮಾತುಗಳಿಗೆ ಒತ್ತು ನೀಡಬೇಕಿಲ್ಲ. ಜಲೀಲ್ ಗೆ ಕಾಶ್ಮೀರದ ಇತಿಹಾಸ ಗೊತ್ತಿಲ್ಲ. ಜಲೀಲ್ ಅವರಿಗೆ ಸ್ವಾತಂತ್ರ್ಯ ಹೋರಾಟದ ಅರಿವೂ ಇಲ್ಲ. ಕಣ್ಣೂರಿನಲ್ಲಿ ಹಿಂಸಾಚಾರ ನಡೆಸದಂತೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಆರ್.ಎಸ್.ಎಸ್ ಜೊತೆಗಿನ ಒಡನಾಟದ ಬಗ್ಗೆ ಹೆಮ್ಮೆ ಇದೆ; ಶಿಕ್ಷಣ ಕ್ಷೇತ್ರದಲ್ಲಿ ಆರ್‍ಎಸ್‍ಎಸ್‍ನ ಕೆಲಸ ಅತ್ಯಮೂಲ್ಯ; ಬಹಿರಂಗ ಹೇಳಿಕೆ ನೀಡಿದ ರಾಜ್ಯಪಾಲ
0
ಆಗಸ್ಟ್ 26, 2022





