ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಇದರ ತಾಲೂಕು ಮಟ್ಟದ ಸ್ವಾತಂತ್ರ್ಯ ಅಮೃತೋತ್ಸವದ ಇತಿಹಾಸ ವಿಚಾರ ಸಂಕಿರಣ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಮತ್ತು ಬಿ ಯಂ ರಾಮಯ್ಯ ಶೆಟ್ಟಿ ಗ್ರಂಥಾಲಯದ ಸಹ ಭಾಗಿತ್ವದಲ್ಲಿ ಗೋವಿಂದ ಪೈ ಸ್ಮಾರಕ ಗಿಳಿವಿಂಡಲ್ಲಿ ನಡೆಯಿತು. ತಾಲೂಕು ಲೈಬ್ರೆರಿ ಕೌನ್ಸಿಲ್ ಉಪಾಧ್ಯಕ್ಪ ಶಾಮ ಭಟ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷ ಕೆ ವಿ ಕುಂಞÂ ರಾಮನ್ ಉದ್ಘಾಟಿಸಿದರು.
'ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ತುಳುನಾಡ ಪಾತ್ರ' ವಿಷಯದಲ್ಲಿ ಡಾ . ಪುರμÉೂೀತ್ತಮ ಬಿಳಿಮಲೆ ಮಾತನಾಡಿದರು. ಭಾರತ ಸ್ವಾತಂತ್ರದ 75 ನೇ ವರ್ಷದ ಅಂಗವಾಗಿ ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್ ಸ್ವಾತಂತ್ರ್ಯ ಹೋರಾಟದ ವಿಭಿನ್ನ ಮುಖಗಳ ಬಗ್ಗೆ ಹತ್ತು ಸಾವಿರ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಭಾಗವಾಗಿ ಮಂಜೇಶ್ವರ ತುಳುನಾಡಿನ ಸ್ವಾತಂತ್ರ್ಯ ಹೋರಾಟದ ಕುರಿತು ( ಅಮರ ಸುಳ್ಯ ದಂಗೆ , ಗಾಂಧಿ ಭೇಟಿ , ಕಾರ್ನಾಡ್ ಸದಾಶಿವ ರಾವ್ , ಕೆ ಆರ್ ಕಾರಂತ , ಬಿ ವಿ ಕಕ್ಕಿಲ್ಲಾಯ , ಕಮಲಾದೇವಿ ಮೊದಲಾದ ಮಹನೀಯರ ಕುರಿತು ) ಉಪನ್ಯಾಸ ನೀಡಿದರು.
ಬಹು ಭಾμÁ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ಮಂಜೇಶ್ವರ ಗೋವಿಂದ ಪೈ ಹಾಗೂ ಕಯ್ಯಾರ ಕಿಞ್ಞಣ್ಣ ರೈ ಅವರ ಸ್ವಾತಂತ್ರ್ಯ ಹೋರಾಟ ಸ್ಮರಣೆ ಮಾಡಿ ಮಾತನಾಡಿದರು. ಮಂಜೇಶ್ವರ ಮತ್ತು ವರ್ಕಾಡಿ ಪಂಚಾಯತು ಅಧ್ಯಕ್ಷರಾದ ಜೀನ್ ಲವೀನಾ ಮೊಂತೆರೋ ,ಭಾರತಿ ಶೆಟ್ಟಿ ಉಪಸ್ಥಿತರಿದ್ದು ಮಾತನಾಡಿದರು. ಕೌನ್ಸಿಲ್ ನ ಪ್ರತಿನಿಧಿಗಳಾದ ಅಹ್ಮದ್ ಹುಸೈನ್ ಪಿ ಕೆ, ಶ್ರೀಕುಮಾರಿ, ದಾಸಪ್ಪ ಶೆಟ್ಟಿ, ಗಿರಿಜಾ ತಾರಾನಾಥ್, ಜಯಂತ ಮಾಸ್ತರ್ ಮತ್ತು ಬಾಲಕೃಷ್ಣ ಶೆಟ್ಟಿಗಾರ್ ಶುಭಾಶಂಸನೆಗೈದರು. ತಾಲೂಕಿನ ವಿವಿಧ ಗ್ರಂಥಾಲಯಗಳಿಂದ ಸದಸ್ಯರು ಭಾಗವಹಿಸಿದ್ದರು.
ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಕಮಲಾಕ್ಷ ಡಿ ಸ್ವಾಗತಿಸಿ, ಬಿ.ಯಂ. ರಾಮಯ್ಯ ಶೆಟ್ಟಿ ಗ್ರಂಥಾಲಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ವಂದಿಸಿದರು.
ಭಾರತ ಸ್ವಾತಂತ್ರ್ಯ ಅಮೃತೋತ್ಸವ: ತಾಲೂಕು ಲೈಬ್ರರಿ ಕೌನ್ಸಿಲ್ ನಿಂದ ಇತಿಹಾಸ ವಿಚಾರ ಸಂಕಿರಣ
0
ಆಗಸ್ಟ್ 27, 2022

.jpg)
