ಮುಳ್ಳೇರಿಯ: ಬೆಳ್ಳೂರು ಪಳ್ಳಪ್ಪಾಡಿ ಕರಿಂಬಿಲ್ ಮೆಡಿಕಲ್ ಸೆಂಟರ್(ಕೆಎಂಸಿ)ನಲ್ಲಿ ಅಸ್ತಿತ್ವಂ ಪ್ರತಿಷ್ಠಾನ, ಕರಿಂಬಿಲ್ ಮೆಡಿಕಲ್ ಸೆಂಟರ್, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇವರ ಜಂಟಿ ಆಶ್ರಯದಲ್ಲಿ ಬೆಳ್ಳೂರು ಗ್ರಾಮ ಪಂಚಾಯತಿ ಕುಟುಂಬಶ್ರೀ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಡ್ಕ ವಲಯದ ವಿವಿಧ ಒಕ್ಕೂಟಗಳ ಸಹಕಾರಗಳೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಕಾಸರಗೋಡು ಸರ್ಕಾರಿ ಆಸ್ಪತ್ರೆಯ ಡಾ. ಕೃಷ್ಣ ನಾಯ್ಕ ಉದ್ಘಾಟಿಸಿ ಪ್ರತಿಯೊಬ್ಬರೂ ಆರೋಗ್ಯ ದೃಷ್ಟಿಯಿಂದ ಯಾವುದೇ ಖಾಯಿಲೆ ಇಲ್ಲದಿದ್ದರೂ ಆರೋಗ್ಯ ತಪಾಸಣೆ ಮಾಡಿಕೊಂಡು ಶರೀರದಲ್ಲಿ ಉಂಟಾಗುವ ಕೆಲವು ರೋಗ ಲಕ್ಷಣಗಳನ್ನು ಗುರುತಿಸಿ ಸಕಾಲದಲ್ಲಿ ಚಿಕಿತ್ಸೆ ನೀಡುವತ್ತ ಗಮನ ಹರಿಸಬೇಕು. ಶರೀರದಲ್ಲಿ ತೋರಿ ಬರುವ ಸಣ್ಣ ಪುಟ್ಟ ಬದಲಾವಣೆಗಳನ್ನು ನಿರ್ಲಕ್ಷಿಸದೇ ಮುಂದೆ ಸಮಸ್ಯೆಗಳು ಎದುರಾಗದಂತೆ ತಡೆಯುವತ್ತ ಗಮನ ಹರಿಸಬೇಕು. ಆ ನಿಟ್ಟಿನಲ್ಲಿ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು. ಅದರಲ್ಲೂ ಚಿಕಿತ್ಸಾ ಕಡಿಮೆ ಇರುವ ಹಳ್ಳಿ ಪ್ರದೇಶಗಳಲ್ಲಿ ಇಂತಹ ಶಿಬಿರಗಳು ಅಗತ್ಯ ಹಾಗೂ ಅರ್ಥಪೂರ್ಣ ಎಂದು ಹೇಳಿದರು.
ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ ಅಧ್ಯಕ್ಷತೆ ವಹಿಸಿದರು. ನಟ ಬಿಗ್ ಬೋಸ್ ಖ್ಯಾತಿಯ ಬಡೆಕ್ಕಿಲ ಪ್ರದೀಪ್ ಬೆಳ್ಳೂರು, ಗ್ರಾ.ಪಂ. ಮಾಜಿ ಅಧ್ಯಕ್ಷ ಕಲ್ಲಗ ಚಂದ್ರಶೇಖರ ರಾವ್ ಮುಖ್ಯ ಅತಿಥಿಗಳಾಗಿದ್ದರು. ಕೆವಿಜಿ ಮೆಡಿಕಲ್ ಕಾಲೇಜಿನ ವೈದ್ಯೆ ಗೀತಾ ದೊಪ್ಪ, ಕೆಎಂಸಿ ಆಸ್ಪತ್ರೆಯ ಸುಶೀಲಾ ಬಾಲಗೋಪಾಲನ್, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಅಧ್ಯಕ್ಷ ಚನಿಯಪ್ಪ ನಾಯ್ಕ, ಡಾ. ಎಂ.ವಿ. ಭಟ್, ಡಾ. ಶ್ರೀಜಿತ್, ಅಸ್ತಿತ್ವಂ ಪ್ರತಿಷ್ಠಾನದ ಮಹೇಶ್ ವಳಕ್ಕುಂಜ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸದ್ಬಾವನಾ ಪ್ರಶಸ್ತಿ ಪುರಸ್ಕøತ ದಾನಿಗಳಾದ ಪ್ರಭಾಕರ ಕಲ್ಲೂರಾಯನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಎಂ. ಉಡುಪ ಕುಂಟಾರು ಸ್ವಾಗತಿಸಿ, ಬೆಳ್ಳೂರು ಗ್ರಾಮ ಪಂ. ಸಿಡಿಎಸ್ ಅಧ್ಯಕ್ಷೆ ಮಾಲಿನಿ ವಂದಿಸಿದರು. ಧ.ಗ್ರಾ.ಯೋಜನೆಯ ಕಾರಡ್ಕ ವಲಯ ಮೇಲ್ವಿಚಾರಕ ಅನಿಲ್ ಕಾರ್ಯಕ್ರಮ ನಿರೂಪಿಸಿದರು.
ಕೋಟ್ಸ್:
ಮನುಷ್ಯನಿಗೆ ಅನಾರೋಗ್ಯ ಬರುವುದು ಸಹಜ. ಆದರೆ ಅನಾರೋಗ್ಯ ಬರುವುದಕ್ಕಿಂತ ಮೊದಲೇ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬುದ್ಧಿವಂತರ ಲಕ್ಷಣ. ನಾವು ಇಂದಿನ ಆಹಾರ ಪದ್ಧತಿಯ ಕಾರಣದಿಂದಲೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇವೆ. ಅದೆಷ್ಟೋ ಚಿಕ್ಕ ಮಕ್ಕಳಿಗೂ ಕೂಡ ಭೀಕರ ಕಾಯಿಲೆ ಮಧುಮೇಹ, ಬಿ.ಪಿ.ಯಂತಹ ರೋಗಗಳು ಬರುತ್ತಿರುವುದಕ್ಕೆ ಕಾರಣ ಈಗಿನ ಆಹಾರ ಪದ್ಧತಿ. ಆದ ಕಾರಣ ಜಂಕ್ ಫುಡ್ ಕಲ್ಚರ್‍ನಿಂದ ಹೊರಬಂದು ನಮ್ಮ ಹಿರಿಯರ ಆಹಾರ ಪದ್ಧತಿ, ಯೋಗ ಇತ್ಯಾದಿಗಳೊಂದಿಗೆ ಬೆಳಗ್ಗೆ ಬೇಗನೆ ಏಳುವುದು, ಉತ್ತಮ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ.
-ನಟ ಬಿಗ್ ಬೋಸ್ ಖ್ಯಾತಿಯ ಬಡೆಕ್ಕಿಲ ಪ್ರದೀಪ್

.jpg)
