ಬದಿಯಡ್ಕ: ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯ ಏತಡ್ಕ ಇದರ ಅಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಂಥಾಲಯದ ಅಧ್ಯಕ್ಷ ವೈ.ವಿ. ಸುಬ್ರಹ್ಮಣ್ಯ ಧ್ವಜಾರೋಹಣಗೈದು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭೌತಶಾಸ್ತ್ರದಲ್ಲಿ ಪಿಎಚ್‍ಡಿ ಬರೆದ ಗುರುಕೃಷ್ಣ ಕಳೆಯತ್ತೋಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಡಾ. ಮೋಹನ್ ಕುಮಾರ್ ಏತಡ್ಕ, ಹವ್ಯಾಸಿ ಪತ್ರಕರ್ತ ಚಂದ್ರಶೇಖರ ಏತಡ್ಕ, ಉದಯ ಕುಮಾರ್ ಕಲ್ಲಕಟ್ಟ ಮಾತನಾಡಿದರು. ಗ್ರಂಥಾಲಯದ ಮಾಜಿ ಅಧ್ಯಕ್ಷ ನರಸಿಂಹ ಭಟ್ ಕಟ್ಟದಮೂಲೆ ಸ್ವರಚಿತ ಕವನ ವಾಚನ ಮಾಡಿದರು. ಕಾರ್ಯದರ್ಶಿ ಡಾ.ವೇಣುಗೋಪಾಲ ಕಳೆಯತ್ತೋಡಿ ಸ್ವಾಗತಿಸಿ, ಉಪಾಧ್ಯಕ್ಷ ವೈ.ಕೆ.ಗಣಪತಿ ಭಟ್ ವಂದಿಸಿದರು. ಪದಾಧಿಕಾರಿಗಳು, ಊರವರು ಪಾಲ್ಗೊಂಡಿದ್ದರು.
ಏತಡ್ಕ ಗ್ರಂಥಾಲಯದಲ್ಲಿ ಆಜಾದಿಕಾ ಅಮೃತ ಮಹೋತ್ಸವ
0
ಆಗಸ್ಟ್ 20, 2022
Tags




.jpg)
