ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿದ್ದ
ರಾಷ್ಟ್ರೀಯ ಸೇವಾ ಯೋಜನೆಯ ಸಪ್ತ ದಿನ ಶಿಬಿರ ಗುರುವಾರ ಸಂಪನ್ನಗೊಂಡಿತು. ಸಮಾಮರೋಪ ಸಮಾರಂಭದ ಉದ್ಘಾಟನೆಯನ್ನು ಆದಿವಾಸಿ ಕ್ಷೇಮ ಬೋರ್ಡ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೃಷ್ಣ ಪೆರಡಾಲ ಉದ್ಘಾಟಿಸಿದರು. ಏಳು ದಿನಗಳಕಾಲ ನಡೆದ ಶಿಬಿರದ ಪ್ರಯೋಜನವನ್ನು ವಿದ್ಯಾರ್ಥಿಗಳು ಸಮಾಜದ ಶ್ರೇಯಸ್ಸಿಗೆ ಉಪಯೋಗಿಸಬೇಕೆಂದು ಕರೆ ನೀಡಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶಾಫಿ ಚೂರಿಪಳ್ಳ ಅಧ್ಯಕ್ಷತೆ ವಹಿಸಿದರು. ಅಧ್ಯಾಪಕರಾದ ನಿರಂಜನ ರೈ ಪೆರಡಾಲ, ಶ್ರೀನಾಥ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಿಬಿರದ ನಾಯಕಿ ಗೋಪಿಕಾ ಸ್ವಾಗತಿಸಿ, ಯೋಜನಾ ಸಂಚಾಲಕ ರಾಜೀವನ್ ಮಾಸ್ತರ್ ವಂದಿಸಿದರು.
ನವಜೀವನ ಹೈಯರ್ ಸೆಕೆಂಡರಿ ಶಾಲೆ ರಾಷ್ಟ್ರೀಯ ಸೇವಾ ಯೋಜನೆ ಸಪ್ತ ದಿನ ಶಿಬಿರ ಸಂಪನ
0
ಆಗಸ್ಟ್ 20, 2022
Tags




.jpg)
