ಕುಂಬಳೆ: ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರ ಸಾರಥ್ಯದಲ್ಲಿ ಮುಜಂಗಾವು ಶ್ರೀ ಸಾರಥಿ ಮಕ್ಕಳ ಭಜನಾ ಸಂಘದ ರಾಮಾಯಣ ಮಾಸದ ಮನೆಮನೆ ಭಜನಾ ಸಂಕೀರ್ತನೆ ರವಿಕಾಂತ ರೈ ಅವರ ಮನೆಯಲ್ಲಿ ಪರಿ ಸಮಾಪ್ತಿಗೊಂಡಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು, ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ವಲಯ ಅಧ್ಯಕ್ಷ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಮಾಡಿದ ಈ ನಿರಂತರ ಒಂದು ತಿಂಗಳ ಪರ್ಯಂತದ ಮನೆಮನೆ ಭಜನಾ ಯಾನವು ಮುಂದೆಯೂ ಎಲ್ಲಾ ಮನೆ ಮನೆಗಳಲ್ಲಿ ನಡೆಸುವಂತೆ ಮನವಿ ಮಾಡಿದರು. ಮಕ್ಕಳು ಮಾಡಿದಂತಹ ಈ ಅಭಿಯಾನವು ಅತ್ಯಂತ ಶ್ಲಾಘನೀಯ. ಸಮಾಜಕ್ಕೆ ಒಳ್ಳೆಯ ರೀತಿಯ ಧಾರ್ಮಿಕ ಚಿಂತನೆಯನ್ನು ಮೂಡಿಸುವಲ್ಲಿ ಹರಿದಾಸ ಜಯಾನಂದ ಹೊಸದುರ್ಗ ಇವರು ಯಶಸ್ವಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು. ಸಮಾಜ ಸೇವಕ ಗೋಪಾಲ ಗಟ್ಟಿ ಉಪಸ್ಥಿತರಿದ್ದರು. ರೋಹಿತ್ ಮಧೂರು ಕಾರ್ಯಕ್ರಮ ನಿರೂಪಣೆ ಮಾಡಿದರು. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಸ್ಥಳೀಯ ಸಮಾಜ ಬಾಂಧವರು ಉಪಸ್ಥಿತರಿದ್ದರು. ಬಳಿಕ ಅನ್ನದಾನ ಏರ್ಪಡಿಸಲಾಗಿತ್ತು. ಇದರೊಂದಿಗೆ ಈ ವರ್ಷದ ರಾಮಾಯಣ ಮಾಸದ ಮನೆ ಮನೆ ಭಜನಾ ಕಾರ್ಯಕ್ರಮ ಸಂಪನ್ನಗೊಂಡಿತು.




.jpg)
.jpg)
