ಬದಿಯಡ್ಕ: ಪೆರಡಾಲ ಉದನೇಶ್ವರ ದೇವಸ್ಥಾನದ ಪರಿಸರದಲ್ಲಿ ವಿವಿಧ ಸಾಂಸ್ಕøತಿಕ, ಆಟೋಟ ಸ್ಪರ್ಧೆಗಳೊಂದಿಗೆ ಜರಗಿತು. ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀ ವೆಂಕಟರಮಣ ಭಟ್ ಚಂಬಲ್ತಿಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಾಮಾಜಿಕ ಧಾರ್ಮಿಕ ನೇತಾರ ತಿರುಪತಿ ಕುಮಾರ್ ಭಟ್ ವಹಿಸಿದರು. ಗ್ರಾ.ಪಂ. ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ ಮುಖ್ಯ ಅತಿಥಿಯಾಗಿ ಮಾತನಾಡಿ ಉತ್ಸವಗಳನ್ನು ಸಮಗ್ರವಾಗಿ ಆಚರಣೆ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭಾವನೆ ಮೂಡುತ್ತದೆ ಎಂದು ಹೇಳಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬದಿಯಡ್ಕ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಜಿ. ರವಿಕುಮಾರ್ ರೈ ಬಹುಮಾನ ವಿತರಿಸಿದರು. ಉದನೇಶ್ವರ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ವ್ಯಾಪಾರಿ ವ್ಯವಸಾಯಿ ಏಕೋ ಉಪನಸಮಿತಿ ಬದಿಯಡ್ಕ ಘಟಕದ ಕಾರ್ಯದರ್ಶಿ ನರೇಂದ್ರ ಬಿ ಎನ್, ಸಂಘಟಕ ರಾಮ ಮುರಿಯಂಕೂಡ್ಲು, ವಿನಯ ಜೆ. ರೈ ಶುಭಾಶಂಸನೆಗೈದರು. ಕ್ಷೇತ್ರದ ಟ್ರಸ್ಟಿ ಪಿ.ಜಿ. ಜಗನ್ನಾಥ ರೈ ,ಕೃಷ್ಣ ಪೆರಡಾಲ, ಜಗದೀಶ ಪೆರಡಾಲ, ಜಯಲತ ಟೀಚರ್ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ಸಂದೀಪ್ ಸ್ವಾಗತಿಸಿ, ಕಾರ್ಯದರ್ಶಿ ಸನ್ನಿ ಪೆರಡಾಲ ವಂದಿಸಿದರು.

.jpg)
.jpg)
.jpg)
.jpg)
