ಬದಿಯಡ್ಕ: ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ದ್ವಿತೀಯ ಚಾತುರ್ಮಾಸ್ಯದ ಅಂಗವಾಗಿ ದಿನನಿತ್ಯ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದುಬರುತ್ತಿದ್ದು, ಊರ-ಪರವೂರ ಭಕ್ತರು ಭೇಟಿ ನೀಡಿ ಪುನೀತರಾಗುತ್ತಿದ್ದಾರೆ.
ಆನ್ಮಾಷ್ಟಮಿಯ ಪುಣ್ಯ ದಿನವಾದ ಗುರುವಾರ ವಿವಿಧ ಕಾರ್ಯಕ್ರಮಗಳು ಪೂಜಾ ವಿಧಿಗಳು ನೆರವೇರಿತು. ಬೆಳಿಗ್ಗೆ ಎಡನೀರು ಶ್ರೀಗೋಪಾಲಕೃಷ್ಣ ಭಜನಾ ಮಂಡಳಿಯವರಿಂದ ಸಂಕೀರ್ತನೆ ನಡೆಯಿತು. ಸಂಜೆ ಡಾ.ರಾಧಿಕಾ ಕಲ್ಲೂರಾಯ ಹಾಗು ರಮೇಶ್ ಚಂದ್ರ ಅವರಿಂದ ದಾಸ ಸಂಗೀತ ನೃತ್ಯನಮನ ನಡೆಯಿತು. ವಸಂತಕುಮಾರ್ ಕುಂಬಳೆ(ಕೀಬೋರ್ಡ್), ರಾಘವೇಂದ್ರ ಜೋಶಿ(ತಬಲಾ), ಜಯ(ರಿದಂ ಪ್ಯಾಡ್)ನಲ್ಲಿ ಸಾಥ್ ನೀಡಿದರು. ಬಳಿಕ ರಾತ್ರಿ ಶ್ರೀಗಳಿಂದ ಆರಾಧ್ಯಮೂರ್ತಿ ದಕ್ಷಿಣಾಮೂರ್ತಿ ಶ್ರೀಗೋಪಾಲಕೃಷ್ಣ ದೇವರಿಗೆ ವಿಶೇಷ ಅಭಿಷೇಕ, ಪೂಜೆ, ಅರ್ಚನೆಗಳು ನೆರವೇರಿದವು.
ಇಂದಿನ ಕಾರ್ಯಕ್ರಮ:
ಇಂದು(ಶನಿವಾರ) ಸಂಜೆ 6 ರಿಂದ ಶ್ರೀಮಠದಲ್ಲಿ ಕಲೆ ಮತ್ತು ಭಾರತೀಯ ಸಂಸ್ಕøತಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಉಪನ್ಯಾಸ ನೀಡುವರು. ಖ್ಯಾತ ಭಾಗವತ ಯಕ್ಷದ್ರುವ ಪಟ್ಲಪೌಂಡೇಶನ್ ಕೇಂದ್ರಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಅಭ್ಯಾಗತರಾಗಿ ಉಪಸ್ಥಿತರಿರುವರು. ಬಳಿಕ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗ್ರಜ ಕ್ಷೇತ್ರ ಪಾವಂಜೆ ಇವರಿಂದ ಸುದರ್ಶನ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ.

.jpg)
.jpg)
.jpg)
