ಬದಿಯಡ್ಕ: ವಿಘ್ನೇಶ್ವರ ಯಕ್ಷಗಾನ ಕಲಾಸಂಘ ನೀರ್ಚಾಲು ನೇತೃತ್ವದಲ್ಲಿ ನಾಳೆ(ಆ.21)ಅಗ್ರಮಾನ್ಯ ಕಲಾವಿದರ ಕೂಡುವಿಕೆಯಲ್ಲಿ ಅಪರಾಹ್ನ 2 ರಿಂದ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಸ್ಕೂಲು ವಠಾರದಲ್ಲಿ ಭೀಷ್ಮ ವಿಜಯ ಆಖ್ಯಾಯಿಕೆಯ ಮಹೋನ್ನತ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ದೀಪ ಬೆಳಗಿಸಿ ಚಾಲನೆ ನೀಡುವರು. ಬಳಿಕ ನಡೆಯಲಿರುವ ತಾಳಮದ್ದಳೆ ಕೂಟದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ವೆಂಕಟರಮಣ ಭಟ್ ತಲ್ಪನಾಜೆ, ಲಕ್ಷ್ಮೀನಾರಾಯಣ ಅಡೂರು, ಲಕ್ಷ್ಮೀಶ ಬೇಂದ್ರೋಡಿ ಹಿಮ್ಮೇಳದಲ್ಲಿ ಹಾಗೂ ಶಂಭು ಶರ್ಮಾ ವಿಟ್ಲ, ಉಜಿರೆ ಅಶೋಕ ಭಟ್, ರಾಧಾಕೃಷ್ಣ ಕಲ್ಚಾರ್, ಜಬ್ಬಾರ್ ಸಮೋ ಸಂಪಾಜೆ, ಮವ್ವಾರು ಬಾಲಕೃಷ್ಣ ಮಣಿಯಾಣಿ ಮುಮ್ಮೇಳ ಪಾತ್ರವರ್ಗದಲ್ಲಿ ಪಾಲ್ಗೊಳ್ಳುವರು. ಕಲಾಭಿಮಾನಿಗಳು ಕ್ಲಪ್ತ ಸಮಯಕ್ಕೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಯಕ್ಷಗಾನ ಕಲಾಸಂಘದ ಪದಾಧಿಕಾರಿಗಳು ವಿನಂತಿಸಿದ್ದಾರೆ.
ನಾಳೆ ನೀರ್ಚಾಲಿನಲ್ಲಿ ಯಕ್ಷಗಾನ ತಾಳಮದ್ದಳೆ
0
ಆಗಸ್ಟ್ 20, 2022




