ಕಾಸರಗೋಡು: ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆ ಜೋಡಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದಕ್ಕಾಗಿ ಹೆಲ್ಪ್ ಡೆಸ್ಕ್ ಚಟುವಟಿಕೆ ನಡೆಸುತ್ತಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‍ವೀರ್‍ಚಂದ್ ಅವರು ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಪಟ್ಟಿಗೆ ಜೋಡಣೆ ಮಾಡುವ ಮೂಲಕ ಹೆಲ್ಪ್‍ಡೆಸ್ಕ್ ಉದ್ಘಾಟನೆ ನೆರವೇರಿಸಿದರು.ಜೀ ಸಂದರ್ಭ ಮಾತನಾಡಿದ ಅವರು ಆಧಾರ್ ಜೋಡಣೆ ಮಾಡುವುದರಿಂದ ಮತದಾರರ ಪಟ್ಟಿಯ ನಕಲು ಮತ್ತು ಮೋಸದ ಮತಗಳನ್ನು ತಡೆಗಟ್ಟಬಹುದು ಜತೆಗೆ ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಸಾಧ್ಯ. ಇದಕ್ಕಾಗಿ ಜನರು ಈ ಯಜ್ಞದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಸಹಾಯ ಕೇಂದ್ರವು ಜಿಲ್ಲಾಧಿಕಾರಿಗಳ ಕಛೇರಿಯ ಮುಖ್ಯ ದ್ವಾರ ಮತ್ತು ಚುನಾವಣಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಲಿದೆ. ಎಲ್ಲಾ ತಾಲೂಕು ಕಚೇರಿಗಳಲ್ಲೂ ಸಹಾಯ ಕೇಂದ್ರ (ಹೆಲ್ಪ್ ಡೆಸ್ಕ್)ಕಾರ್ಯಾಚರಿಸಲಿದೆ. ಮತದಾರರು ತಮ್ಮ ಆಧಾರ್ ಕಾರ್ಡ್ ಮತ್ತು ಚುನಾವಣಾ ಗುರುತಿನ ಚೀಟಿಯೊಂದಿಗೆ ಸಹಾಯ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಮತದಾರರ ಪಟ್ಟಿಯೊಂದಿಗೆ ತಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬಹುದಾಗಿದೆ. ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ತಮ್ಮ ಮತದಾರರ ಗುರುತಿನ ಚೀಟಿಯೊಂದಿಗೆ ಭಾರತೀಯ ಚುನಾವಣಾ ಆಯೋಗದ ವೆಬ್ ಪೆÇೀರ್ಟಲ್ ತಿತಿತಿ.ಟಿvsಠಿ.iಟಿ ಮತ್ತು ಮತದಾರರ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಲಿಂಕ್ ಮಾಡಬಹುದಾಗಿದೆ.
ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್: ಸಹಾಯ ಕೇಂದ್ರ (ಹೆಲ್ಪ್ ಡೆಸ್ಕ್)ಕ್ಕೆ ಚಾಲನೆ
0
ಆಗಸ್ಟ್ 26, 2022
Tags


