ಕಾಸರಗೋಡು: ಜಲಜೀವನ ಮಿಷನ್ ಗ್ರಾಮೀಣ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಕಿನಾನೂರು-ಕರಿಂದಲಂ ಗ್ರಾಮ ಪಂಚಾಯಿತಿ ವತಿಯಿಂದ ಪರಪ್ಪ ಪ್ರಾದೇಶಿಕ ಕಾರ್ಯಾಗಾರ ಪರಪ್ಪ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಿನಾನೂರು ಕರಿಂದಲಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ರವಿ ಸಮಾರಂಭ ಉದ್ಘಾಟಿಸಿದರು. ಪರಪ್ಪ ಬ್ಲಾಕ್ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ವಿ.ಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ.ಅಜಿತ್ ಕುಮಾರ್, ಸಿಲ್ವಿ ಜೋಸ್, ಕೇರಳ ಜಲ ಪ್ರಾಧಿಕಾರದ ಸಹಾಯಕ ಎಂಜಿನಿಯರ್ ಕೆ.ಅಖಿಲೇಶ್ ಮತ್ತು ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಸಂಯೋಜಕ ಕೆ.ಪಿ.ಜೋಸೆಫ್ ಮಾತನಾಡಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಚ್.ಅಬ್ದುಲ್ ನಾಸರ್ ಸ್ವಾಗತಿಸಿ, ಪಂಚಾಯಿತಿ ಸದಸ್ಯ ಎಂ.ಬಿ.ರಾಘವನ್ ವಂದಿಸಿದರು.
ಪರಪ್ಪದಲ್ಲಿ ಜಲಜೀವನ ಮಿಷನ್ ಕಾರ್ಯಾಗಾರ
0
ಆಗಸ್ಟ್ 26, 2022
Tags


