HEALTH TIPS

ವಿಶ್ವ ಛಾಯಗ್ರಹಣ ದಿನ, ಇತಿಹಾಸ, ಮಹತ್ವ, ಥೀಮ್ ಇಲ್ಲಿದೆ

            ಇಂದು ಛಾಯಾಗ್ರಹಣವು ಯುವಜನತೆಯ ನೆಚ್ಚಿನ ವೃತ್ತಿ ಕ್ಷೇತ್ರವಾಗಿದ್ದು, ಅನೇಕರು ಇಂದು ಇದನ್ನೇ ತನ್ನ ಜೀವನಾಧಾರವಾಗಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಛಾಯಾಗ್ರಹಣವನ್ನು ಫ್ಯಾಷನ್ ಆಗಿ ಮಾಡಿಕೊಂಡಿದ್ದಾರೆ. ಛಾಯಾಗ್ರಹಣವು ಕಣ್ಣಾರೆ ಕಂಡಿರುವುದನ್ನು ದಾಖಲೆಯ ರೂಪದಲ್ಲಿ ಇರಿಸಿಕೊಳ್ಳುವ ಒಂದು ಸಾಧನವಾಗಿದೆ. ಈ ಕಲಾ ಪ್ರಕಾರವನ್ನು ಆಚರಿಸಲು ಪ್ರತಿ ವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ಛಾಯಾಗ್ರಹಣ ಕಲೆಗೆ ಗೌರವ ಮತ್ತು ಅದರ ಬಗ್ಗೆ ಆಸಕ್ತಿ ಹೊಂದಿರುವ ಜನರಿಗೆ ಪ್ರೋತ್ಸಾಹವನ್ನು ನೀಡುವ ದಿನ ಇದಾಗಿದೆ. ಅಷ್ಟೇ ಅಲ್ಲದೆ ಇದು ಛಾಯಾಗ್ರಹಣದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಜನರಿಗೆ ಪ್ರೇರಣೆ ನೀಡುತ್ತದೆ. ಈ ಬಾರಿ “ಕ್ಯಾಮೆರಾ ಕಣ್ಣಿನಲ್ಲಿ ಕೊವಿಡ್ ಸಂಕಷ್ಟ” ಎಂಬ ಥೀಮ್ ಮೂಲಕ ವಿಶ್ವ ಛಾಯಗ್ರಾಹಕರ ದಿನವನ್ನು ಆಚರಿಸಲಾಗುತ್ತಿದೆ.


                    ವಿಶ್ವ ಛಾಯಾಗ್ರಹಣ ದಿನದ ಇತಿಹಾಸ

        1837 ರಲ್ಲಿ ಫ್ರೆಂಚ್‌ನ ಜೋಸೆಫ್ ನೈಸ್‌ಫೋರ್ ನೀಪ್ಸ್ ಮತ್ತು ಲೂಯಿಸ್ ಡಾಗುರ್ರೆ ಅವರು ‘ಡಾಗ್ಯುರೋಟೈಪ್’ ಎಂಬ ಪೆಟ್ಟಿಗೆ ಆಕಾರದ ಸಾಧನವನ್ನು ಕಂಡುಹಿಡಿದರು. ಇದು ವಿಶ್ವದ ಮೊದಲ ಛಾಯಾಗ್ರಹಣ ಪ್ರಕ್ರಿಯೆಯಾಗಿದೆ. 1839 ಜನವರಿ 9 ರಂದು ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಅಧಿಕೃತವಾಗಿ ಡಾಗ್ಯುರೋಟೈಪ್ ಅನ್ನು ಅನುಮೋದಿಸಿತು.

             ಇದಾದ ಏಳು ತಿಂಗಳ ನಂತರ ಅಂದರೆ ಆಗಸ್ಟ್ 19 ರಂದು ಫ್ರೆಂಚ್ ಸರ್ಕಾರವು ಸಾಧನಕ್ಕಾಗಿ ಪೇಟೆಂಟ್ ಅನ್ನು ಖರೀದಿಸಿದೆ ಎಂದು ನಂಬಲಾಗಿದೆ. ಅವರು ಡಾಗ್ಯುರೊಟೈಪ್​ನ ಆವಿಷ್ಕಾರವನ್ನು ಜಗತ್ತಿಗೆ ಉಡುಗೊರೆಯಾಗಿ ಘೋಷಿಸುವುದರ ಜೊತೆಗೆ ಅದು ಎಲ್ಲರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಿದರು. ಕಾಲಾನಂತರದಲ್ಲಿ ಈ ದಿನವನ್ನು ವಿಶ್ವ ಛಾಯಾಗ್ರಹಣ ದಿನವೆಂದು ಗುರುತಿಸಲು ಪ್ರಾರಂಭಿಸಲಾಯಿತು.


               ಅಂದಿನಿಂದ ಛಾಯಾಗ್ರಹಣವು ತಂತ್ರಜ್ಞಾನದಲ್ಲಿನ ಬೆಳವಣಿಗೆಗಳು ಮತ್ತು ಪ್ರಗತಿಗಳೊಂದಿಗೆ ವಿಕಸನಗೊಳ್ಳುತ್ತಿದೆ. ಮೊದಲ ಬಾಳಿಕೆ ಬರುವ ಬಣ್ಣದ ಛಾಯಾಚಿತ್ರವನ್ನು 1861ರಲ್ಲಿ ಸೆರೆಹಿಡಿಯಲಾಯಿತು. ಆದರೆ ಮೊದಲ ಡಿಜಿಟಲ್ ಛಾಯಾಚಿತ್ರವನ್ನು 1957 ರಲ್ಲಿ ರಚಿಸಲಾಯಿತು.

                               ವಿಶ್ವ ಛಾಯಾಗ್ರಹಣ ದಿನದ ಮಹತ್ವ

               ವಿಶ್ವ ಛಾಯಾಗ್ರಹಣ ದಿನವು ಛಾಯಾಗ್ರಹಣದ ಕಲೆ ಮತ್ತು ಕರಕುಶಲತೆಯನ್ನು ಮತ್ತು ಈ ಮಾಧ್ಯಮದ ಬಗ್ಗೆ ಜನರು ಹೊಂದಿರುವ ಉತ್ಸಾಹವನ್ನು ಆಚರಿಸುತ್ತದೆ. ಛಾಯಾಗ್ರಹಣದ ಉದ್ದೇಶವು ಹೇಗೆ ವಿಕಸನಗೊಂಡಿತು ಎಂಬುದನ್ನು ಕೂಡ ಈ ದಿನವು ತಿಳಿಸುತ್ತದೆ. ಕಳೆದ ದಶಕದಲ್ಲಿ ಬಹಳಷ್ಟು ಯುವಕರು ಛಾಯಾಗ್ರಹಣವನ್ನು ಹವ್ಯಾಸವಾಗಿ ತೆಗೆದುಕೊಳ್ಳಲು ತಾಂತ್ರಿಕ ಸಾಧನಗಳಲ್ಲಿ ಆದ ಪ್ರಗತಿ ಮತ್ತು ಅವುಗಳ ಬಳಕೆಯ ಸುಲಭತೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಆಗಸ್ಟ್ 19 ಹೆಚ್ಚು ಮಹತ್ವದ್ದಾಗಿದೆ, ಏಕೆಂದರೆ ಇದು ಹೆಚ್ಚಿನ ಜನರನ್ನು ಛಾಯಾಗ್ರಹಣವನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಅಥವಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ವ್ಯಕ್ತಪಡಿಸಲು ಪ್ರೇರೇಪಿಸುತ್ತದೆ.

                 ಆಗಸ್ಟ್ ೧೯ ಒಂದು ವಿಶಿಷ್ಟ ದಿನ. ಬೆಳಕನ್ನು ಲೇಖನಿಯಾಗಿಸಿಕೊಂಡು, ಸೃಜನಶೀಲತೆಯಿಂದ ನಮ್ಮ ಚಿತ್ತ ಭಿತ್ತಿಯಲ್ಲಿ ಅಮೂರ್ತವಾದ ರೂಪವೊಂದನ್ನು ಮೂಡಿಸುವ ಕಲೆಗಾರರ ಕಲೆ ನೆನೆಯುವ ದಿನ. ಆದರೂ ಬಹುತೇಕರಿಗೆ ಈ ಆಚರಣೆ ತಿಳಿದಿಲ್ಲ! ಕಾರಣ ಈ ದಿನಾಚರಣೆಯನ್ನು ವೃತ್ತಿನಿರತ ಛಾಯಾ ಪತ್ರಕರ್ತರಾಗಲಿ ಅಥವಾ ಹವ್ಯಾಸಿ ಛಾಯಾಗ್ರಾಹಕರಾಗಲಿ ಬ್ರ್ಯಾಂಡ್ ರೂಪದಲ್ಲಿ ಟಂಕಿಸುವಲ್ಲಿ ವಿಫಲರಾಗಿದ್ದಾರೆ.


            ವೃತ್ತಿನಿರತ ಛಾಯಾಗ್ರಾಹಕರು ಈ ದಿನ ಒಂದೆಡೆ ಕಲೆಯಬೇಕು. ತಮ್ಮ ವೃತ್ತಿ ಬದುಕಿನ ತವಕತಲ್ಲಣ ಹಾಗೂ ಅವಿಸ್ಮರಣೀಯ ಘಟನೆಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಜತೆಗೆ ವೃತ್ತಿಬಾಂಧವರ ಭಾವನೆಗಳಿಗೆ ಸ್ಪಂದಿಸಿ ಹಗುರಾಗಲು ಒಂದು ವೇದಿಕೆಯನ್ನು ಸಜ್ಜುಗೊಳಿಸುವ ಅವಶ್ಯಕತೆ ಮನಗಾಣಲಾಯಿತು. ಹೀಗೆ ಗೆಟ್ ಟು ಗೆದರ್ ಎಂಬ ಸರಳ ಮಾದರಿಯಲ್ಲಿ ಛಾಯಾಪತ್ರಕರ್ತರು ಈ ಆಚರಣಿಗೆ ಎರಡು ದಶಕಗಳ ಹಿಂದೆ ನಾಂದಿ ಹಾಡಿದರು.

           ಫೋಟೊಗ್ರಫಿ ಎಂಬುದು ಗ್ರೀಕ್ ಭಾಷೆಯ ಪದ. ‘ಫೋಸ್ ಎಂದರೆ ಬೆಳಕು, ‘ಗ್ರಾಫಿಯಿನ್ ಎಂದರೆ ಬರೆದ, ಅರ್ಥಾತ್ ಬೆಳಕಿನಿಂದ ಬರೆದದ್ದು -ಛಾಯಾಗ್ರಹಣ. ಈ ಪದವನ್ನು ಮೊದಲ ಬಾರಿಗೆ ಟಂಕಿಸಿದವರು ಸರ್ ಜಾನ್ ಹರ್ಷೆಲ್. ಜಾರ್ಜ್ ಈಸ್ಟ್‌ಮನ್, ಹಿಪೊಲೈಟ್ ಬೇಯರ್ಡ್, ಹರ್ಬರ್ಟ್ ಬೋಯರ್ ಬರ್ಕ್ಲಿ, ಫ್ರೆಡ್ರಿಕ್ ಲಾಂಘೆಮ್ ಮೊದಲಾದ ಮಹನೀಯರ ಶ್ರಮ ಇಂದಿನ ಆಧುನಿಕ ಕ್ಯಾಮೆರಾಗಳ ಹಾಗೊಂದು ವೇಳೆ ವಿಶ್ವ ಛಾಯಾಗ್ರಹಣ ದಿನದ ಮಹತ್ವ ವಿಶ್ಲೇಷಿಸಿದ್ದೇ ಆದರೆ, ಈ ಛಾಯಾಗ್ರಹಣ ದಿನದ ಹುಟ್ಟು ಡೆಗೋರಿಯೋಮಾದರಿಯ ಕ್ಯಾಮೆರಾ ಆವಿಷ್ಕಾರಗೊಂಡ ದಿನವೇ ಆಗಿದೆ! ಲೂಯಿಸ್ ಡೆಗೋರಿಯೋ ಎಂಬ ಮಹಾನುಭಾವ ತನ್ನ ಸತತ ಪರಿಶ್ರಮದ ಫಲವಾಗಿ ಕ್ರೂಡ್ ಕ್ಯಾಮೆರಾ ಕಂಡು ಹಿಡಿದು, ಚಿತ್ರಗಳನ್ನು ಸೆರೆ ಹಿಡಿಯುವ ಕನಸಿಗೆ ರೆಕ್ಕೆ ಹಚ್ಚಿದ.


           ಡೆಗೋರಿಯೋ ಮಾದರಿಯ ಕ್ಯಾಮೆರಾ ಅವಿಷ್ಕಾರಗೊಂಡ ಕೆಲ ತಿಂಗಳ ಬಳಿಕ ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಈ ಆವಿಷ್ಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ಜಗತ್ತಿಗೆ ಚಲನಶೀಲವಲ್ಲದ ಸ್ಥಿರವಾದ, ವಾಸ್ತವಿಕ ಬಿಂಬಗಳನ್ನು ಈ ಡೆಗೋರಿಯೋ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಸಾಧ್ಯ ಎಂದು ಘೋಷಿಸಿತು. ಇದು ಛಾಯಾಚಿತ್ರಗಳನ್ನು ಸೆರೆ ಹಿಡಿಯ ಬಯಸುವವರ ಜಗತ್ತಿನಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಿದ್ದಲ್ಲದೇ, ನೂತನ ಸಾಧ್ಯತೆಗಳ ಆವಿಷ್ಕಾರಕ್ಕೆ ಮುನ್ನುಡಿ ಬರೆಯಿತು.

             ಆಗಸ್ಟ್ಟ್ ೧೯, ೧೮೩೯ ರಲ್ಲಿ ಫ್ರೆಂಚ್ ಸರಕಾರ ಈ ಕ್ಯಾಮೆರಾ ಆವಿಷ್ಕಾರವನ್ನು ತಾನು ಜಗತ್ತಿಗೆ ನೀಡುತ್ತಿರುವ ಉಚಿತ ಉಡುಗೊರೆ ಎಂದು ಅಭಿಮಾನದಿಂದ ಘೋಷಿಸಿತು. ನಂತರ ೧೮೩೯ ರಲ್ಲಿಯ ವಿಲಿಯಮ್ ಫಾಕ್ಸ್ ಟಾಲ್‌ಬಾಟ್ ಎಂಬ ಮಹಾಶಯ ಕ್ಯಾಲೋಟೈಪ್ ಕ್ಯಾಮೆರಾ ಸಂಶೋಧಿಸಿದ. ೧೮೪೧ ರಲ್ಲಿ ಈ ಸಂಶೋಧನೆಯನ್ನು ಫ್ರೆಂಚ್ ಸರಕಾರ ಅಧಿಕೃತವಾಗಿ ಘೋಷಿಸಿತು. ಹೀಗಾಗಿ, ‘ಡೆಗೋರಿಯೋ ಟೈಪ್ಮತ್ತು ಕ್ಯಾಲೋ ಟೈಪ್ ಎರಡೂ ಛಾಯಾಗ್ರಹಣ ಪರಿಕರಗಳನ್ನು ಇಬ್ಬರು ಅತೃಪ್ತ ಅನ್ವೇಷಕರು ೧೮೩೯ ರಲ್ಲಿ ಕಂಡು ಹಿಡಿದ ಸವಿ ನೆನೆಪಿಗಾಗಿ ಪ್ರತಿ ವರ್ಷ ಆಗಸ್ಟ್ ೧೯ ನ್ನು ವಿಶ್ವ ಛಾಯಾಗ್ರಹಣ ದಿನವನ್ನಾಗಿ ಆಚರಿಸಲಾಗುತ್ತದೆ.

              ಖ್ಯಾತ ವೈದ್ಯ ಸಾಹಿತಿ ಡಾ. .. ನಾಗಲೋಟಿಮಠ ಸದಾ ಯುವ ಬರಹಗಾರರಿಗೆ ಒಂದು ಕಿವಿ ಮಾತನ್ನು ಹೇಳುತ್ತಿದ್ದರು. ತಮ್ಮಾ..ಚಿತ್ರ ಹೆಂಗ ಇರಬೇಕಪಾ ಅಂದ್ರ, ಅದು ನೋಡಿವಂಥವ್ರಿಗೆ ಓದಿಸಿಕೊಂಡು ಹೋಗಬೇಕು ಅಥವಾ ಓದಾಕ ಬರಬೇಕು. ಇನ್ನ ಬರವಣಿಗೆ ಹೆಂಗ ಇರಬೇಕು ಅಂದ್ರ ಅದು ಒಂದ ಚಿತ್ರಣ ಕಟ್ಟಿಕೊಡಬೇಕು. ಹೊಸ ಲೋಕವನ್ನ ಅನಾವರಣ ಗೊಳಿಸಬೇಕು!


         


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries