HEALTH TIPS

ಹೃದಯಾಘಾತಕ್ಕೆ ಮುನ್ನ ದೇಹ ಸೂಚಿಸುವ ಈ ಮುನ್ಸೂಚನೆ ನಿರ್ಲಕ್ಷ್ಯ ಮಾಡಲೇಬೇಡಿ

 ಹೃದಯಾಘಾತ ಮಧ್ಯವಯಸ್ಸು ದಾಟಿ ಮೇಲೆ ಬರುತ್ತೆ, ತುಂಬಾ ದಪ್ಪ ಇರುವವರಿಗೆ ಬರುತ್ತೆ ಎಂದೇನು ಇಲ್ಲ, ಈಗೆಲ್ಲಾ ತುಂಬಾ ಚಿಕ್ಕ ಪ್ರಾಯದವರಿಗೂ ಹೃದಯಾಘಾತ ಕಂಡು ಬರುತ್ತಿದೆ. ತುಂಬಾ ಫಿಟ್‌ ಆಗಿರುವವರಿಗೂ ಹಾರ್ಟ್ ಅಟ್ಯಾಕ್‌ ಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿಈ ಹಾರ್ಟ್‌ ಅಟ್ಯಾಕ್ ತುಂಬಾನೇ ಕೇಳಿ ಬರುತ್ತಿದೆ. ಇದು ಕ್ಯಾನ್ಸರ್‌ಗಿಂತಲೂ ಭಯಾನಕವಾಗಿ ಕಾಡುತ್ತಿದೆ.

ತುಂಬಾ ಚೆನ್ನಾಗಿ ಫಿಟ್‌ ಆಗಿರುತ್ತಾರೆ, ಯಾವುದೇ ಆರೋಗ್ಯ ಸಮಸ್ಯೆ ಇರಲ್ಲ, ಅಂಥವರೂ ಹಾರ್ಟ್‌ಅಟ್ಯಾಕ್‌ನಿಂದಾಗಿ ಸಾವನ್ನಪ್ಪುತ್ತಿರುವುದು ಆಘಾತಕಾರಿ ಸಂಗತಿಯೇ...

ಹಾಗಾದರೆ ಈ ಹಾರ್ಟ್‌ ಅಟ್ಯಾಕ್ ಬರುವ ಗೊತ್ತಾಗುವುದಿಲ್ಲವೇ? ಹಾರ್ಟ್‌ ಅಟ್ಯಾಕ್‌ ಆಗುವ ಕೆಲ ದಿನಗಳ ಮುಂಚೆಯೇ ನಮ್ಮ ದೇಹ ಅದರ ಸೂಚನೆ ಕೊಟ್ಟಿರುತ್ತದೆ, ಆದರೆ ನಾವು ಗಮನಿಸಿರುವುದಿಲ್ಲ, ಈ ಕಾರಣದಿಂದಾಗಿಯೇ ಹೆಚ್ಚಿನ ಸಾವುಗಳು ಸಂಭವಿಸುತ್ತಿದೆ. ಆದ್ದರಿಂದ ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ:

ಆಗಾಗ ಉಸಿರಾಟಕ್ಕೆ ತೊಂದರೆ'

ಆಗಾಗ ಉಸಿರಾಟಕ್ಕೆ ತೊಂದರೆಯಾಗುತ್ತಿದ್ದರೆ ಹೃದಯಕ್ಕೆ ಏನೋ ಸಮಸ್ಯೆವಿದೆ ಎಂದರ್ಥ. ಇನ್ನು ಕಾಲು, ಪಾದಗಳಲ್ಲಿ ಊತ ಕೂಡ ಹೃದಯಕ್ಕೆ ತೊಂದರೆಯಿದೆ ಎಂದು ಸೂಚಿಸುವ ಲಕ್ಷಣಗಳಾಗಿವೆ. ಇನ್ನು ತಲೆ ಸುತ್ತು ಕೂಡ ಹೃದಯಾಘಾತದ ಪ್ರಮುಖ ಲಕ್ಷಣವಾಗಿದೆ ಎಂದು ಅಮೆರಿಕನ್‌ ಹಾರ್ಟ್ ಅಸೋಷಿಯೇಷನ್ ಹೇಳಿದೆ.

ಹೊಟ್ಟೆ ಹಾಳಾಗುವುದು, ವಾಂತಿ ಕೂಡ ಹೃದಯಾಘಾತದ ಲಕ್ಷಣವಾಗಿದೆ

ಹೊಟ್ಟೆ ಹಾಳಾಗುವುದು,ವಾಂತಿ ಇವುಗಳು ಹೃದಯಾಘಾತ ಪ್ರಾರಂಭದ ಲಕ್ಷಣವಾಗಿದೆ.

ನಿದ್ರಾ ಹೀನತೆ, ಖಿನ್ನತೆ, ಒತ್ತಡ

ಹೃದಯಾಘಾತ ಉಂಟಾಗುವ ಮುನ್ನ ಕೆಲವು ದಿನಗಳಿಂದ ಕಾರಣವೇ ಇಲ್ಲದೆ ನಿದ್ರಾಹೀನತೆ ಉಂಟಾಗಿರುತ್ತೆ. ಇನ್ನು ಹೃದಯದಲ್ಲಿ ಸಮಸ್ಯೆಯಿದ್ದಾಗ ಅಂಗಾತ ಮಲಗಿದ್ದಾಗ ಉಸಿರಾಟಕ್ಕೆ ತೊಂದರೆ ಉಂಟಾಗುವುದು.

ಮಹಿಳೆಯರಿಗೆ ಹೊಟ್ಟೆ ಹಾಳಾಗುವುದು ಹೃದಯಾಘಾತದ ಲಕ್ಷಣವಾಗಿದೆ

ವಾಂತಿ, ಬೇಧಿ, ಬೆವರುವುದು, ಊತ, ನೋವು, ಖಿನ್ನತೆ, ಒತ್ತಡ ಇವೆಲ್ಲಾ ಲಕ್ಷಣಗಳು ಮಹಿಳೆಯರಲ್ಲಿ ಕಂಡು ಬಂದರೆ ಅದು ಹೃದಯಾಘಾತದ ಸೂಚನೆಗಳಾಗಿವೆ. ಈ ಲಕ್ಷಣಗಳು ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚಾಗಿ ಕಂಡು ಬರುವುದು.

ಈ ರೀತಿಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ, ಕೂಡಲೇ ಒಂದ ಇಸಿಜಿ ಮಾಡಿಸಿ, ಇದರಿಂದ ಮುಂದಾಗುವ ಅಪಾಯವನ್ನು ತಪ್ಪಿಸಿ.


 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries