ತಿರುವನಂತಪುರ: ಶಾಲೆಗಳಲ್ಲಿ ಲಿಂಗ ತಟಸ್ಥತೆ ಜಾರಿ ವಿರುದ್ಧ ಮುಸ್ಲಿಂ ಸಂಘಟನೆಗಳು ಮುಗಿಬಿದ್ದಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಮಗ್ಗುಲ ಬದಲಾಯಿಸಿದ್ದಾರೆ.
ಮಕ್ಕಳನ್ನು ಒಟ್ಟಿಗೆ ಕುಳ್ಳಿರಿಸಿ ಕಲಿಸಲಾಗುತ್ತದೆ ಎಂದು ಹೇಳಿಲ್ಲ, ಶಾಲೆಗಳಲ್ಲಿ ಲಿಂಗ ಸಮಾನತೆ ಹೇರುವ ಉದ್ದೇಶ ನಮಗಿಲ್ಲ ಎಂದು ಸಚಿವ ವಿ.ಶಿವಂಕುಟ್ಟಿ ಹೇಳಿದರು. ಲಿಂಗ ತಟಸ್ಥ ವಿವಾದದ ನಂತರ ಪಠ್ಯಕ್ರಮ ಸುಧಾರಣೆಗೆ ಸಂಬಂಧಿಸಿದ ಕರಡು ವಿಧಾನದ ದಾಖಲೆಯಲ್ಲಿನ ಪ್ರಶ್ನೆಯನ್ನು ಸರ್ಕಾರ ಬದಲಾಯಿಸಿದ ನಂತರ ಶಿವಂಕುಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಹುಡುಗ-ಹುಡುಗಿಯರು ಅಕ್ಕಪಕ್ಕ ಕೂರಬಾರದು ಎಂಬ ಹೇಳಿಕೆ ಬಂದಾಗ, ಮಕ್ಕಳು ಒಟ್ಟಿಗೆ ಕುಳಿತರೆ ಏನು ಸಮಸ್ಯೆ ಎಂದು ಪ್ರತಿಕ್ರಿಯಿಸಿದ್ದರು. ಆದರೆ ಒಟ್ಟಿಗೆ ಕುಳ್ಳಿರಿಸಿ ಬೋಧಿಸಲಾಗುತ್ತದೆ ಎಂದು ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ ಎಂದು ಶಿವಂಕುಟ್ಟಿ ತಿಳಿಸಿದರು. ಶಾಲೆಗಳನ್ನು ಮಿಶ್ರ ಮಾಡಲು ಪಿಟಿಎ ಮತ್ತು ಸ್ಥಳೀಯ ಸಂಸ್ಥೆಗಳು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಶಿಕ್ಷಣ ಸಚಿವರು ಹೇಳಿದರು.
ಹುಡುಗರು ಮತ್ತು ಹುಡುಗಿಯರನ್ನು ಮಿಶ್ರಣ ಮಾಡುವ ಪ್ರಸ್ತಾಪವನ್ನು ಕರಡು ಲಿಂಗ ತಟಸ್ಥತೆಯ ಪಠ್ಯಕ್ರಮದ ವಿಧಾನದ ದಾಖಲೆಯಿಂದ ನಿನ್ನೆ ಕೈಬಿಡಲಾಗಿದೆ. ತರಗತಿಗಳಲ್ಲಿ ಲಿಂಗ-ತಟಸ್ಥ ಆಸನವನ್ನು ಒದಗಿಸಬಾರದು ಎಂಬ ಪ್ರಶ್ನೆಯನ್ನು ಸಹ ಸರಿಪಡಿಸಲಾಗಿದೆ. "ಸೀಟು" ಎಂಬ ಪದವನ್ನು ಬಿಟ್ಟು "ಶಾಲಾ ಪರಿಸರ" ಎಂಬ ಪದವನ್ನು ಸೇರಿಸಲಾಯಿತು. 'ಲಿಂಗ ಸಮಾನತೆ ಆಧಾರಿತ ಶಿಕ್ಷಣ' ಎಂಬ ಶೀರ್ಷಿಕೆಯನ್ನು 'ಲಿಂಗ ನ್ಯಾಯ ಆಧಾರಿತ ಶಿಕ್ಷಣ' ಎಂದು ಬದಲಾಯಿಸಲಾಗಿದೆ. ಮುಸ್ಲಿಂ ಸಂಘಟನೆಗಳು ತೀವ್ರ ಪ್ರತಿಭಟನೆಗೆ ಮುಂದಾದಾಗ ಸರ್ಕಾರ ಮಂಡಿಯೂರಿತು.
ಹುಡುಗರು ಮತ್ತು ಹುಡುಗಿಯರು ಒಟ್ಟಿಗೆ ಕುಳಿತು ಬೋಧಿಸಲಾಗುತ್ತದೆ ಎಂದು ಹೇಳಿಲ್ಲ: ಮುಖ್ಯಮಂತ್ರಿಯ ಬಳಿಕ ಮಗ್ಗುಲ ಬದಲಿಸಿದ ಶಿವಂಕುಟ್ಟಿ
0
ಆಗಸ್ಟ್ 25, 2022





