ತಿರುವನಂತಪುರ: ಅಧಿಕಾರ ದುರುಪಯೋಗದ ಆರೋಪದಲ್ಲಿ ವಜಾಗೊಂಡಿದ್ದ ಇನ್ಸ್‍ಪೆಕ್ಟರ್‍ಗೆ ಮತ್ತೆ ಪೋಲೀಸ್ ಸೇವೆಗೆ ಅನುಮತಿಸಲಾಗಿದೆ. ತೊಡಪುಳ ಎಸ್‍ಎಚ್‍ಒ ಎನ್‍ಜಿ ಶ್ರೀಮೋನ್ ಅವರನ್ನು ವಾಪಸ್ ಕರೆಸಿ ಅಪರಾಧ ವಿಭಾಗಕ್ಕೆ ನೇಮಿಸಲಾಗಿದೆ.
18 ಪ್ರಕರಣಗಳಲ್ಲಿ ಅಧಿಕಾರ ದುರುಪಯೋಗದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶ್ರೀಮೋನ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
ಕಸ್ಟಡಿ ಥಳಿತ, ಲಂಚ ಮತ್ತು ಬೆದರಿಕೆಯ ಆರೋಪಗಳನ್ನು ಅಧಿಕಾರಿ ಎದುರಿಸಿದ್ದರು. ಅವರ ವಿರುದ್ಧ ಸುಮಾರು 70 ದೂರುಗಳು ದಾಖಲಾಗಿದ್ದವು. ಇವುಗಳಲ್ಲಿ 18 ನೈಜವಾಗಿರುವುದು ಸ್ಪಷ್ಟವಾಗಿದೆ.
ಅವರ ವಿರುದ್ಧ ದೂರುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿವರವಾದ ತನಿಖೆಯಲ್ಲಿ ಅಧಿಕಾರ ದುರುಪಯೋಗ ಕಂಡುಬಂದ ನಂತರ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಎನ್‍ಜಿ ಶ್ರೀಮೋನ್ ಅವರಂತಹ ಅಧಿಕಾರಿಗಳು ಸಮಾಜಕ್ಕೇ ಅಪಾಯ ಎಂದು ಹೈಕೋರ್ಟ್ ಉಲ್ಲೇಖಿಸಿತ್ತು. ಬಳಿಕಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು.
ಹೈಕೋರ್ಟ್ ಕ್ರಮದ ವಿರುದ್ಧ ಶ್ರೀಮೋನ್ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಕಾನೂನು ಸುವ್ಯವಸ್ಥೆ ಉಸ್ತುವಾರಿ ಎಡಿಜಿಪಿ ವಿಜಯ್ ಸಾಕಾರೆ ಅವರು ಅನುಕೂಲಕರ ನಿಲುವು ತಳೆದಿದ್ದಾರೆ.
ಅಧಿಕಾರಿಯನ್ನು ಅಪರಾಧ ವಿಭಾಗಕ್ಕೆ ನಿಯೋಜಿಸಲಾಗಿದೆ. ನಿನ್ನೆ ಸಚಿವರೊಂದಿಗೆ ವಾಗ್ವಾದ ನಡೆಸಿದ ವಟ್ಟಪಾರ ಸಿಐ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆ ಸ್ಥಾನಕ್ಕೆ ಎನ್.ಜಿ.ಶ್ರೀಮೋನ್ ಅವರನ್ನು ಅಪರಾಧ ವಿಭಾಗಕ್ಕೆ ನೇಮಕ ಮಾಡಲಾಗಿದೆ.
ಹೈಕೋರ್ಟ್ ವಜಾಗೊಳಿಸಿದ್ದ ಪೋಲೀಸ್ ಅಧಿಕಾರಿ ಮರುಸೇರ್ಪಡೆ
0
ಆಗಸ್ಟ್ 24, 2022





