ಕೊಚ್ಚಿ: ಬೇಕರಿಯಿಂದ ಕೊಂಡು ತಂದ ಹಲ್ವಾವನ್ನು ತಿನ್ನುವಾಗ ಶ್ವಾಸನಾಳಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಆಘಾತಕಾರಿ ಘಟನೆ ಕೇರಳದಲ್ಲಿ ಶುಕ್ರವಾರ ವರದಿಯಾಗಿದೆ.
ನಿಜಾರ್ (49) ಮೃತಪಟ್ಟ ವ್ಯಕ್ತಿ. ಈತ ಕೇರಳದ ಥಾಮರಾ ಮುಕ್ಕುವಿನ ಚೆರುಪುಲ್ಲಿಪರಂಬುವಿನ ನಿವಾಸಿ. ಹಲ್ವಾ ಶ್ವಾಸನಾಳದಲ್ಲಿ ಸಿಲುಕಿಕೊಂಡು ನಿಜಾರ್ ಮನೆಯಲ್ಲೇ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ನಿಜಾರ್ ಕಾರ್ಮಿಕನಾಗಿದ್ದ. ಬುಧವಾರ ಬೆಳಗ್ಗೆ ಆತ ಬೇಕರಿಯಲ್ಲಿ ಹಲ್ವಾ ಕೊಂಡು ತಂದು ಸೇವಿಸಿದ್ದ. ಬಳಿಕ ದೇಹದಲ್ಲಿ ಕೊಂಚ ಇರುಸುಮುರುಸು ಉಂಟಾಗಿ, ಕುಸಿದುಬಿದ್ದಿದ್ದ. ತಕ್ಷಣ ಆತನನ್ನು ಸ್ಥಳೀಯರು ಛಕಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಮಂಜಾಳಿ ಜುಮಾ ಮಸೀದಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಶ್ವಾಸನಾಳದಲ್ಲಿ ಹಲ್ವಾ ಸಿಲುಕಿ ಮೃತಪಟ್ಟಿದ್ದಾನೆಂದು ಮರಣೋತ್ತರ ವರದಿಯಲ್ಲಿ ತಿಳಿದುಬಂದಿದೆ. ನಜಾರ್ ಅವರು ತಮ್ಮ ಪತ್ನಿ ರಮ್ಲಾ ಮತ್ತು ಮಕ್ಕಳಾದ ನಿಲೋಫರ್ ಮತ್ತು ಜೆನ್ನಿಫರ್ ಅವರನ್ನು ಅಗಲಿದ್ದಾರೆ.





