ಬದಿಯಡ್ಕ: ಕೇರಳ ಮರಾಠಿ ಸಂರಕ್ಷಣಾ ಸಮಿತಿ ವತಿಯಿಂದ ಸೆ.19ರಂದು 9ನೇ ವರ್ಷದ ಮರಾಠಿ ದಿನ 2022 ಬದಿಯಡ್ಕ ಗುರುಸದನದಲ್ಲಿ ನಡೆಯಲಿದೆ.
ಬೆಳಗ್ಗೆ 9.30ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಶಿವಪ್ಪ ನಾಯ್ಕ ಓಣಿಯಡ್ಕ ಧ್ವಜಾರೋಹಣಗೈಯಲಿದ್ದಾರೆ. ಕೇರಳ ಮರಾಠಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸುವರು. ಕೋಝಿಕೋಟ್ ಸಿಟಿ ಪೋಲೀಸ್ ಕಮಿಷನರ್ ಹರಿಶ್ಚಂದ್ರ ನಾಯ್ಕ ಉದ್ಘಾಟಿಸಲಿದ್ದಾರೆ. ಕರ್ನಾಟಕ ಮರಾಠಿ ಸಂಘ ಬೆಂಗಳೂರು ಇದರ ಅಧ್ಯಕ್ಷ ದುರ್ಗಾಪ್ರಸಾದ್ ಮಜೆಕ್ಕಾರು ಮುಖ್ಯ ಅತಿಥಿಯಾಗಿ ಹಾಗೂ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಶುಭಾಶಂಸನೆಗೈಯಲಿದ್ದಾರೆ. ಉನ್ನತ ಅಂಕ ಗಳಿಸಿದ ಸಮಾಜ ವಿದ್ಯಾರ್ಥಿಗಳಿಗೆ ಅಭಿನಂದನೆ, ಪದ್ಮಶ್ರೀ ಪ್ರಶಸ್ತಿ ವಿಜೇತ ಮಹಾಲಿಂಗ ನಾಯ್ಕ ಅಮೈ ಅಡ್ಯನಡ್ಕ ಇವರಿಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.
ಸೆ.19ರಂದು ಬದಿಯಡ್ಕದಲ್ಲಿ ಮರಾಟಿ ದಿನಾಚರಣೆ
0
ಸೆಪ್ಟೆಂಬರ್ 17, 2022
Tags

