ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಸಂಚಾಲಕರಾಗಿ , ಅಧ್ಯಾಪಕರಾಗಿ ಮೀಂಜ ಪ್ರದೇಶದ ವಿದ್ಯಾಭ್ಯಾಸ ಕ್ಷೇತ್ರದ ಧ್ರುವತಾರೆಯೆನಿಸಿಕೊಂಡಿರುವ ದಿ. ಯಂ ರಾಮಕೃಷ್ಣ ರಾವ್ ಅವರ 17ನೇ ಪುಣ್ಯತಿಥಿಯ ಸಂದರ್ಭ ಸಂಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮ ಸೆಪ್ಟೆಂಬರ್ 25 ಭಾನುವಾರ ಶಾಲಾ ರಂಗಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್.ವಿ ವಹಿಸುವರು. ಪೆರ್ಲ ನಾಲಂದ ವಿದ್ಯಾಲಯದ ಪ್ರಾಚಾರ್ಯ ಡಾ.ಕಿಶೋರ್ ಕುಮಾರ್ ರೈ ಶೇಣಿ ಮುಖ್ಯ ಅತಿಥಿಗಳಾಗಿರುವರು. ಇದೇ ಸಂದರ್ಭ ಶಾಲಾ ಹಳೆ ವಿದ್ಯಾರ್ಥಿ ರವೀಂದ್ರ ಮುನ್ನಿಪ್ಪಾಡಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸೆ.25 ರಂದು ದಿ. ಯಂ ರಾಮಕೃಷ್ಣ ರಾವ್ ಸಂಸ್ಮರಣೆ
0
ಸೆಪ್ಟೆಂಬರ್ 17, 2022
Tags


