ಬದಿಯಡ್ಕ: ಕುಂಬ್ಡಾಜೆ ಗ್ರಾಮಸೇವಾ ಸಂಘ ಗ್ರಂಥಾಲಯ ಏತಡ್ಕ ಇದರ ವತಿಯಿಂದ ಗ್ರಂಥಾಲಯ ದಿನಾಚರಣೆ ನಡೆಯಿತು. ಗ್ರಂಥಾಲಯದ ಅಧ್ಯಕ್ಷ ವೈ. ವಿ ಸುಬ್ರಹ್ಮಣ್ಯ ಧ್ವಜಾರೋಹಣಗೈದು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸವನ್ನು ನಿತ್ಯಜೀವನದಲ್ಲಿ ರೂಢಿಸಿಕೊಳ್ಳಬೇಕು. ಇಂದು ಆಧುನಿಕತೆಗೆ ಮಾರುಹೋಗುತ್ತಿರುವ ಯುವ ಸಮುದಾಯವು ಗ್ರಂಥಾಲಯದತ್ತ ಮನಮಾಡಿದರೆ ಮಾತ್ರ ಗ್ರಂಥಾಲಯಗಳು ಸಾರ್ಥಕತೆಯನ್ನು ಹೊಂದಲು ಸಾಧ್ಯ ಎಂದರು.
ಗ್ರಂಥಾಲಯದ ಕಾರ್ಯದರ್ಶಿ ಡಾ. ವೇಣುಗೋಪಾಲ ಕಳೆಯತ್ತೋಡಿ ಸ್ವಾಗತಿಸಿ, ಉಪಾಧ್ಯಕ್ಷ ವೈ.ಕೆ.ಗಣಪತಿ ಭಟ್ ವಂದಿಸಿದರು.
ಏತಡ್ಕದಲ್ಲಿ ಗ್ರಂಥಾಲಯ ದಿನಾಚರಣೆ
0
ಸೆಪ್ಟೆಂಬರ್ 17, 2022
Tags

.jpeg)
