HEALTH TIPS

ಕುಮಾರಮಂಗಲ ಅಮ್ಮಾ ಗುಂಪಿನಿಂದ ಓಣಂ ಸಂಭ್ರಮಾಚರಣೆ


         ಬದಿಯಡ್ಕ: ಬೇಳ ಕುಮಾರಮಂಗಲ ಅಮ್ಮಾ ಗ್ರೂಪಿನ ವತಿಯಿಂದ ಓಣಂ ಹಬ್ಬವನ್ನು ವಿಶಿಷ್ಟರೀತಿಯಲ್ಲಿ ಆಚರಿಸಲಾಯಿತು. ರತ್ನಾವತಿ ಕುಮಾರಮಂಗಲ ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಪೋಲೀಸ್ ಠಾಣಾಕಾರಿ ವಿನೋದ್ ಕುಮಾರ್ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬದಿಯಡ್ಕ ಗ್ರಾಮಪಂಚಾಯಿತಿ 18 ನೇ ವಾರ್ಡು ಸದಸ್ಯ ಅಬ್ದುಲ್ ರಹಿಮಾನ್ ತೆಂಗಿನ ಹೂವನ್ನು ಅರಳಿಸಿ ಶುಭÀಹಾರೈಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಧಾರ್ಮಿಕ ನೇತಾರ ಸಾಮಾಜಿಕ ಕಾರ್ಯಕರ್ತ, ರಾಮಪ್ಪ ಮಂಜೇಶ್ವರ, ಹಿರಿಯ ಧಾರ್ಮಿಕ ಮುಂದಾಳು ಸರಸ್ವತೀ ಟೀಚರ್ ಬೇಳ, ಕಡಂಬಳ ಮಸೀದಿಯ ಉಸ್ತಾದ್ ಬಶೀರ್, ಹಿರಿಯ ಸಾಮಾಜಿಕ ಮುಂದಾಳು ಮಹಾಲಿಂಗ ಪಾಟಾಳಿ ಕುಮಾರಮಂಗಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಿರಿಯರಿಗೆ, ಪುಟಾಣಿಗಳಿಗೆ, ಮಾತೆಯರಿಗೆ, ಆಟೋಟ ಸ್ಪರ್ಧೆಗಳು, ಮಡಕೆಒಡೆಯುವುದು, ಹಗ್ಗಜಗ್ಗಾಟ, ಸಂಗೀತಕುರ್ಚಿ ಮೊದಲಾದವುಗಳನ್ನು ಹಮ್ಮಿಕೊಳ್ಳಲಾಗಿತ್ತು. 60 ವರ್ಷಕ್ಕಿಂತ ಮೇಲ್ಪಟ್ಟ ಜಾನಕಿ ಎ, ಭಾಗೀರಥಿ ಕುಮಾರಮಂಗಲ, ಬಾಗಿ ನಾಣಿಲ್ ಪಳ್ಳ, ಬಾಗಿ ಕುಮಾರಮಂಗಲ ಮೊದಲಾದವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸ್ಪರ್ಧಾ ವಿಜೇತರಿಗೆ ಛಾಯಾಗ್ರಾಹಕ ಅಪ್ಪಣ್ಣ ಸೀತಾಂಗೋಳಿ ಮಹಾಲಿಂಗ ಪಾಟಾಳಿ, ಸರಸ್ವತಿ ಟೀಚರ್, ರಾಮಪ್ಪ ಮಂಜೇಶ್ವರ, ಲಕ್ಷೀ ಲಕ್ಷಂವೀಡು ಕುಮಾರಮಂಗಲ, ಜಯರಾಮಪ್ಪ ಮೊದಲಾದವರು ಬಹುಮಾನ ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ವಿಘ್ನರಾಜ ಕುಮಾರಮಂಗಲ ಇವರ ಜನ್ಮದಿನವನ್ನು ಆಚರಿಸಲಾಯಿತು. ಮಧ್ಯಾಹ್ನ ನಡೆದ ಓಣಂ ವಿಶೇಷ ಭೋಜನಕೂಟದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದವರು ಪಾಲ್ಗೊಂಡಿದ್ದರು. ಅಪ್ಪಣ್ಣ ಸ್ವಾಗತಿಸಿ, ಧನ್ಯ ಟೀಚರ್ ವಂದಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries