ಬದಿಯಡ್ಕ: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2022ರ ಗೌರವ ಪ್ರಶಸ್ತಿಗೆ ಪಾತ್ರರಾದ ಪ್ರಸಿದ್ಧ ಭಾಗವತರುಗಳಾದ ಪುತ್ತಿಗೆ ರಘುರಾಮ ಹೊಳ್ಳ ಹಾಗೂ ಪಟ್ಲ ಸತೀಶ ಶೆಟ್ಟಿ ಇವರನ್ನು ಎಡನೀರು ಮಠದಲ್ಲಿ ಸನ್ಮಾನಿಸಲಾಯಿತು. ಬುಧವಾರ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದ್ವಿತೀಯ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ರಾತ್ರಿ ಜರಗಿದ ಯಕ್ಷಗಾನ ಬಯಲಾಟದ ವೇದಿಕೆಯಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶಾಲು ಹೊದೆಸಿ, ಅಭಿನಂದನಾ ಪತ್ರದೊಂದಿಗೆ ಶ್ರೀದೇವರ ಪ್ರಸಾದ, ಮಂತ್ರಾಕ್ಷತೆಯನ್ನಿತ್ತು ಭಾಗವತರಿಬ್ಬರನ್ನು ಹರಸಿದರು. ಸನ್ಮಾನಿತರು ತಮ್ಮ ಮನದಾಳದ ಮಾತುಗಳಿಂದ ಯಕ್ಷಗಾನಾಭಿಮಾನಿಗಳ ಮನಸೂರೆಗೈದರು. ಡಾ.ಟಿ. ಶ್ಯಾಮ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ನಿರೂಪಿಸಿದರು.
ಎಡನೀರು ಮಠದಲ್ಲಿ ಭಾಗವತರುಗಳಿಗೆ ಸನ್ಮಾನ
0
ಸೆಪ್ಟೆಂಬರ್ 18, 2022
Tags


