HEALTH TIPS

ಹತ್ತು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಭ್ರಷ್ಟಾಚಾರ ಪತ್ತೆಹಚ್ಚಿದ ವಿಜಿಲೆನ್ಸ್



             ಕಾಸರಗೋಡು: ವಿಜಿಲೆನ್ಸ್ ವಿಭಾಗ ಜಿಲ್ಲೆಯ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತ್ತು ರಸ್ತೆಗಳ ನಿರ್ಮಾಣದಲ್ಲಿ ಲೋಪವುಂಟಾಗಿರುವುದನ್ನು ಪತ್ತೆಹಚ್ಚಲಾಗಿದೆ. ಕಾರಡ್ಕ, ಮುಳಿಯಾರ್, ಮಂಗಲ್ಪಾಡಿ ಮತ್ತು ಕುಂಬಳೆ ಗ್ರಾಪಂ ವ್ಯಾಪ್ತಿಯ ವಿವಿಧ ರಸ್ತೆಗಳಲ್ಲಿ ಈ ಲೋಪ ಪತ್ತೆಯಾಗಿದೆ.
         ಮಂಗಲ್ಪಾಡಿ ಪಂಚಾಯಿತಿಯ ಕಲ್ಪಾರೆ-ಕೊಲ್ಲಾಡಿ ಮತ್ತು ಟಿಪ್ಪುಗಲ್ಲಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಮನೆಗೆ ತೆರಳುವ ರಸ್ತೆಯನ್ನು ಡಾಂಬರೀಕರಣ ನಡೆಸಲಾಗಿದೆ. ಜಿಪಂನ ಕುಂಬ್ಡಾಜೆ-ನಾಟೆಕಲ್ಲು, ಬೇವಿಂಜೆ-ಮಲ್ಲ, ಕರ್ಮಂತೋಡಿ-ಕೊಟ್ಟಂಗುಳಿ ರಸ್ತೆ ಅವಧಿಗೂ ಮುನ್ನ ಶಿಥಲಗೊಂಡಿರುವುದನ್ನು ಪತ್ತೆಹಚ್ಚಲಾಗಿದೆ. ಮಂಗಲ್ಪಾಡಿ ಪಂಚಾಯಿತಿಯಲ್ಲಿ ಬಂದರು ಇಂಜಿನಿಯರಿಂಗ್ ವಿಭಾಗ ನಿರ್ಮಿಸಿರುವ ಒಳಯಂ-ಅಡ್ಕ ಮಸೀದಿ ರಸ್ತೆ ನಿರ್ಮಾಣ ನಡೆದು ಒಂದು ತಿಂಗಳೊಳಗೆ ಸಂಪೂರ್ಣ ಹದಗೆಟ್ಟಿರುವುದನ್ನು ವಿಜಿಲೆನ್ಸ್ ಪತ್ತೆಹಚ್ಚಿದೆ. ವಿಜಿಲೆನ್ಸ್ ಡಿವೈಎಸ್‍ಪಿ ಕೆ.ವಿ ವೇಣುಗೋಪಾಲ್, ಇನ್ಸ್‍ಪೆಕ್ಟರ್ ಪಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ವಿವಿಧ ರಸ್ತೆಗಳ ಶಿಥಿಲಾವಸ್ಥೆ ಹಾಗೂ ನಿರ್ಮಾಣಕಾರ್ಯದಲ್ಲಿನ ಲೋಪಗಳ ಬಗ್ಗೆ ರಾಜ್ಯ ವಿಜಿಲೆನ್ಸ್ ನಿರ್ದೇಶಕರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries