HEALTH TIPS

ಪಿ.ಎಫ್.ಐ.ಹರತಾಳ: ತಲೆಮರೆಸಿಕೊಂಡ ಮುಖಂಡರು: ಪೋಲೀಸರಿಂದ ತೀವ್ರ ತನಿಖೆ


             ತಿರುವನಂತಪುರ: ಕೇರಳದಲ್ಲಿ ಎನ್ ಐಎ ಕ್ರಮ ವಿರೋಧಿಸಿ ಪಾಪ್ಯುಲರ್ ಫ್ರಂಟ್ ಹರತಾಳಕ್ಕೆ ಕರೆ ನೀಡಿದ್ದ ಮುಖಂಡರಲ್ಲಿ ಹಲವರನೇಕರು ಇನ್ನೂ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
          ರಾಜ್ಯ ಕಾರ್ಯದರ್ಶಿ ಕೆ.ರವೂಫ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ಸತ್ತಾರ್ ತಲೆಮರೆಸಿಕೊಂಡವರಲ್ಲಿ ಪ್ರಮುಖರು.  ಎನ್‍ಐಎ ಪ್ರಕರಣದಲ್ಲಿ ಇಬ್ಬರೂ ಆರೋಪಿಗಳು. ಹರತಾಳಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
         ನಿನ್ನೆ ಎನ್‍ಐಎ ನೀಡಿರುವ ರಿಮಾಂಡ್ ವರದಿಯಲ್ಲಿ ಇಬ್ಬರ ಹೆಸರೂ ಇದೆ. ಇವರಿಬ್ಬರನ್ನೂ ಮೂರು ಮತ್ತು ಹನ್ನೆರಡನೇ ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರನ್ನು ಬಂಧಿಸಲು ಎನ್ಐಎ ತನ್ನ ಪ್ರಯತ್ನವನ್ನು ತೀವ್ರಗೊಳಿಸಿದೆ. ಇಬ್ಬರೂ ತಲುಪುವ ಸಾಧ್ಯತೆ ಇರುವ ಸ್ಥಳಗಳನ್ನೂ ಪರಿಶೀಲಿಸಲಾಗುತ್ತಿದೆ.
            ರಾಜ್ಯದೆಲ್ಲೆಡೆ ಹರತಾಳದ ಹೆಸರಿನಲ್ಲಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ದೂಂಡಾವರ್ತನೆ ನಡೆಸಿದ್ದರು.  ಕೋರ್ಟ್ ಕೂಡ ಹರತಾಳವನ್ನು ಟೀಕಿಸಿದೆ. 70 ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಕಲ್ಲು ತೂರಾಟದಿಂದ ಧ್ವಂಸಗೊಳಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‍ಗೆ ವರದಿ ಸಲ್ಲಿಸಿದೆ. ಖಾಸಗಿ ವಾಹನಗಳ ಮೇಲೂ ದಾಳಿ ನಡೆಸಲಾಗಿದೆ. ಆಂಬ್ಯುಲೆನ್ಸ್ ಮೇಲೂ ಕಲ್ಲು ತೂರಾಟ ನಡೆದಿದೆ. ಕಣ್ಣೂರಿನಲ್ಲಿ ಎರಡು ಬಾಂಬ್ ಸ್ಫೋಟಗಳು ನಡೆದಿವೆ. ಕಲ್ಯಾಶ್ಶೇರಿಯಲ್ಲಿ ಬಾಂಬ್ ಸಮೇತ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತನÀನ್ನು ಬಂಧಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ಹಲವು ಕಾರ್ಯಕರ್ತರನ್ನು ಪೆÇಲೀಸರು ಬಂಧಿಸಿದ್ದಾರೆ. 229 ಜನರನ್ನು ಬಂಧಿಸಲಾಗಿದೆ.
          ಈ ನಡುವೆ ಜಾರಿ ನಿರ್ದೇಶನಾಲಯ ಪಾಪ್ಯುಲರ್ ಫ್ರಂಟ್ ವಿರುದ್ಧ ಗಂಭೀರ ಆರೋಪ ಮಾಡಿದೆ. ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಪಾಪ್ಯುಲರ್ ಫ್ರಂಟ್ ಸಂಚು ರೂಪಿಸಿದೆ ಎಂದು ಆರೋಪಿಸಲಾಗಿದೆ. ಕೇರಳದಿಂದ ಇ.ಡಿ. ಗುರುವಾರ ಬಂಧಿಸಿರುವ ಶಫೀಕ್ ಪಿ ಅವರ ರಿಮಾಂಡ್ ವರದಿಯಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries