ಮಂಜೇಶ್ವರ: ತಲಪ್ಪಾಡಿ ಸುಂಕ ವಸೂಲಿ ಕೇಂದ್ರದ ಸಮೀಪವಾಸಿಗಳಾದ ತಲಪ್ಪಾಡಿಯವರಿಗೆ ಸುಂಕ ವಿನಾಯಿತಿ ನೀಡಿರುವಾಗ ಗಡಿಪ್ರದೇಶದಲ್ಲಿ ವಾಸಿಸುವ ಗಡಿನಾಡಿಗರಾದ ಮಂಜೇಶ್ವರ ಗ್ರಾಮ ಪಂಚಾಯಿತಿಯಲ್ಲಿ ವಾಸಿಸುವವರಿಗೆ ವಿನಾಯಿತಿ ನಿಷೇಧಿಸಿರುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಲೆತಾಯಿ ಧೊರಣೆಯೆಂದು ಆರೋಪಿಸಿ ಮಂಜೇಶ್ವರ ಪಂಚಾಯತಿ ಯು.ಡಿ.ಎಫ್. ಸಮಿತಿಯು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹಿಂದೆ ಯು.ಡಿ.ಎಫ್ ನೇತೃತ್ವದಲ್ಲಿ ತಲಪ್ಪಾಡಿ ಟೋಲ್ ಗೇಟಿಗೆ ನಡೆಸಿದ ಮಾರ್ಚ್ ಸಹಿತ ಹೋರಾಟ, ಸುಂಕ ರಿಯಾಯಿತಿ, ಕೊರೋನ ಮಿತಿಮೀರಿದ ಸಂದರ್ಭದಲ್ಲಿ ಪಾಸ್ಟ್ ಟಾಗ್ ಅಳವಡಿಸಿ ಸುಂಕ ವಿನಾಯಿತಿ ಮಂಜೇಶ್ವರ ನಿವಾಸಿಗಳಿಗೆ ಏಕಾಏಕಿ ನಿಲ್ಲಿಸಲಾಗಿತ್ತು. ಬಳಿಕದ ದಿನಗಳಲ್ಲಿ ಕ್ರಮೇಣ ತಲಪ್ಪಾಡಿ ನಿವಾಸಿಗಳಿಗೆ ಸುಂಕ ರಿಯಾಯಿತಿ ಅಳವಡಿಸಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿüಕಾರದ ಪಕ್ಷಪಾತ ಧೋರಣೆಯಾಗಿದೆ. ಇದನ್ನು ಖಂಡಿಸಿ ಕೇರಳ ಜನ್ಮ ದಿನವಾದ ನವಂಬರ್ ಒಂದರಂದು ಸಂಜೆ 4 ಕ್ಕೆ ಮಂಜೇಶ್ವರ ಯು.ಡಿ.ಎಫ್ ಸಮಿತಿಯು ಸಂಜೆ ಸತ್ಯಾಗ್ರಹ ಆಯೋಜಿಸಿದೆ.
ಸತ್ರಾಗ್ರಹವನ್ನು ಯು.ಡಿ.ಎಫ್ ಅಧ್ಯಕ್ಷ ಸೈಪುಲ್ಲ ತಂಙಳ್ ಅವರ ಅಧ್ಯಕ್ಷತೆಯಲ್ಲಿ ಶಾಸಕ ಎ.ಕೆ.ಎಂ ಅಶ್ರಫ್ ಉದ್ಫಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಲೆತಾಯಿ ಧೋರಣೆಕ್ಕೆದುರಾಗಿ ಮಂಜೇಶ್ವರದಲ್ಲಿ ನ.1ಕ್ಕೆ ಯು.ಡಿ.ಎಫ್. ಧರಣಿ
0
ಅಕ್ಟೋಬರ್ 28, 2022
Tags

