ಸಮರಸ ಚಿತ್ರಸುದ್ದಿ: ಪೆರ್ಲ: ನೀರ್ಚಾಲಿನಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಹಾಗೂ ‘ಎ’ ಗ್ರೇಡ್ ಗಳಿಸಿದ ಶೇಣಿ ಶ್ರೀಶಾರದಾಂಬಾ ಎಯುಪಿ ಶಾಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶೇಣಿ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ ಹಾಗೂ ಶಿಕ್ಷಕ ರಕ್ಷಕ ಸಂಘದವರು ವಿಜೇತರನ್ನು ಅಭಿನಂದಿಸಿದ್ದಾರೆ.
ವಿಜ್ಞಾನ ಮೇಳದಲ್ಲಿ ಸಾಧನೆ ಮಾಡಿದ ಶೇಣಿ ಶ್ರೀಶಾರದಾಂಬಾ ಎ ಯು ಪಿ ಶಾಲಾ ವಿದ್ಯಾರ್ಥಿಗಳಿಗೆ ಅಭಿನಂದನೆ
0
ಅಕ್ಟೋಬರ್ 28, 2022

.jpg)
