ಪೆರ್ಲ: ಪರಿಶಿಷ್ಟ ಜಾತಿ ಕ್ಷೇಮ ಸಮಿತಿ ಎಣ್ಮಕಜೆ ಗ್ರಾಮ ಪಂಚಾಯತಿ ಸಮಿತಿ ವತಿಯಿಂದ ಶೆಟ್ಟಿಬೈಲಿನ ಎಸ್.ಸಿ.ಕಾಲನಿ ಪರಿಸರದಲ್ಲಿ ಹಮ್ಮಿಕೊಂಡ ಏಕ ದಿನ ಕ್ರೀಡಾ ಸಮ್ಮೇಳನದ ಬಹುಮಾನ ವಿತರಣೆಯನ್ನು ಕೇರಳ ತುಳು ಆಕಾಡೆಮಿ ಸದಸ್ಯ ನ್ಯಾಯವಾದಿ ಚಂದ್ರಮೋಹನ್ ಕಾಟುಕುಕ್ಕೆ ನಡೆಸಿದರು. ಪಿಕೆಎಸ್ ಕುಂಬಳೆ ಏರಿಯಾ ಕಾರ್ಯದರ್ಶಿ ಸದಾನಂದ ಶೇಣಿ ಉದ್ಘಾಟಿಸಿದರು. ಪಿಕೆಎಸ್ ಎಣ್ಮಕಜೆ ಪಂಚಾಯತಿ ಸಮಿತಿ ಅಧ್ಯಕ್ಷ ಆನಂದ ಕುಕ್ಕಿಲ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯರಾದ ಮಹಾಲಿಂಗ ಸರವು, ಗುರುವ ಸರ್ಪಮಲೆ, ಕೊರಗ ಶೆಟ್ಟಿಬೈಲ್, ಲಲಿತಾ ಸರ್ಪಮಲೆ ಅವರನ್ನು ಸನ್ಮಾನಿಸಲಾಯಿತು.
ಸಿಪಿಐಎಂನ ಕಾಟುಕುಕ್ಕೆ ಲೋಕಲ್ ಸಮಿತಿ ಸದಸ್ಯ ರಾಜಶೇಖರ ಎನ್, ಪಿಕೆಎಸ್ ಪಂ.ಕಾರ್ಯದರ್ಶಿ ಶಶಿಧರ ಕಾಟುಕುಕ್ಕೆ ಮೊದಲಾದವರು ಉಪಸ್ಥಿತರಿದ್ದರು.
ಶೆಟ್ಟಿಬೈಲಿನಲ್ಲಿ ಪಿಕೆಎಸ್ ನಿಂದ ಸಾಧಕರಿಗೆ ಸನ್ಮಾನ: ಬಹುಮಾನ ವಿತರಣೆ
0
ಅಕ್ಟೋಬರ್ 28, 2022
Tags

.jpg)
