ತಿರುವನಂತಪುರ: ಒಂದೆಡೆ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಬೊಬ್ಬೆ ಹೊಡೆಯುತ್ತಲೇ ದುಂದುವೆಚ್ಚ ಮುಂದುವರಿಸಿದೆ.
ಸಚಿವರಿಗೆ ಹೊಸ ಕಾರು ಖರೀದಿಗೆ 1.30 ಕೋಟಿ ಮಂಜೂರಾಗಿದೆ. ಸಚಿವರಾದ ಜಿ.ಆರ್.ಅನಿಲ್, ವಿ.ಎನ್.ವಾಸವನ್, ವಿ.ಅಬ್ದುರ್ ರೆಹಮಾನ್ ಮತ್ತು ಮುಖ್ಯ ಸಚೇತಕ ಎನ್.ಜಯರಾಜ್ ಅವರಿಗೆ ವಾಹನಗಳನ್ನು ಖರೀದಿಸಲಾಗುತ್ತಿದೆ.
ಇನ್ನೋವಾ ಕ್ರಿಸ್ಟಾ ಕಾರುಗಳನ್ನು ಸಚಿವರು ಮತ್ತು ಮುಖ್ಯ ಸಚೇತಕರ ಬಳಕೆಗಾಗಿ ಖರೀದಿಸಲಾಗುತ್ತದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಹೊಸ ವಾಹನಗಳ ಖರೀದಿಗೆ ಸರ್ಕಾರ ನಿರ್ಬಂಧ ಹೇರಿತ್ತು. ಇದೇ ವೇಳೆ ಹೊಸ ಕಾರುಗಳನ್ನು ಖರೀದಿಸಲು ಹಣ ಹಂಚಿಕೆ ಮಾಡಲಾಗಿದೆ.
ಇದೇ ವೇಳೆ, ಕೇರಳ ಆರ್ಥಿಕ ಬಿಕ್ಕಟ್ಟಿನಲ್ಲಿದೆ ಎಂದು ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ನಿನ್ನೆ ಹೇಳಿದ್ದರು. ರಾಜ್ಯದ ಸದ್ಯದ ಪರಿಸ್ಥಿತಿಯಲ್ಲಿ ಸಾಲದ ಮಿತಿಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಹಣಕಾಸು ಸಚಿವರು ಮನವಿ ಮಾಡಿದ್ದರು. ಸಾಲ ಪಡೆಯುವ ಮಿತಿಯನ್ನು ಕನಿಷ್ಠ ಶೇ.1 ರಷ್ಟಾದರೂ ಹೆಚ್ಚಿಸಬೇಕೆಂದು ಮನವಿಮಾಡಿದ್ದರು.
ಆರ್ಥಿಕ ಮುಗ್ಗಟ್ಟಿನ ನಡುವೆಯೂ ಮುಂದುವರಿದ ದುಂದುವೆಚ್ಚ: ಸಚಿವರಿಗೆ ಹೊಸ ಕಾರು ಖರೀದಿಸಲು 1.30 ಕೋಟಿ ರೂ. ಮೀಸಲಿಟ್ಟ ಸರ್ಕಾರ: ಬರಲಿವೆ ಸಚಿವರಿಗೆ ಹೊಸ ಕಾರುಗಳು
0
ನವೆಂಬರ್ 15, 2022





