ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಸೋಮವಾರ ಸಂಭವಿಸಿದ ಭೂಕಂಪನದಿಂದ ಸುಮಾರು 44 ಜನರು ಸಾವಿಗೀಡಾಗಿದ್ದು, ಸಾವಿರಾರು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಆಡಳಿತದ ವಕ್ತಾರರು ಸೋಮವಾರ ತಿಳಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪನವು 5.4 ರ ತೀವ್ರತೆಯನ್ನು ಹೊಂದಿತ್ತು ಮತ್ತು ಜಕಾರ್ತಾದ ದಕ್ಷಿಣದ ಪಟ್ಟಣಗಳ ಬಳಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ.
ಇಂಡೋನೇಷ್ಯಾದ ಪ್ರಮುಖ ದ್ವೀಪವಾದ ಜಾವಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಸುಮಾರು ಕನಿಷ್ಠ 300 ಜನರು ಗಾಯಗೊಂಡಿದ್ದಾರೆ ಎಂದು ಭೂಮಿ ಕಂಪನದಿಂದ ಹೆಚ್ಚಿನ ಹಾನಿಗೊಳಗಾದ ಪಟ್ಟಣದ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ನನಗೆ ದೊರೆತ ಮಾಹಿತಿ ಪ್ರಕಾರ, ಈ ಆಸ್ಪತ್ರೆಯಲ್ಲಿಯೇ ಸುಮಾರು 20 ಮಂದಿ ಮೃತಪಟ್ಟಿದ್ದು, ಕನಿಷ್ಠ 300 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿಕೊಂಡಿದ್ದರಿಂದ ಮುರಿತಗಳನ್ನು ಹೊಂದಿದ್ದರು' ಎಂದು ಸಿಯಾಂಜೂರ್ ಆಡಳಿತದ ಮುಖ್ಯಸ್ಥ ಹರ್ಮನ್ ಸುಹೆರ್ಮನ್ ಬ್ರಾಡ್‌ಕಾಸ್ಟರ್ ಮೆಟ್ರೋ ಟಿವಿಗೆ ತಿಳಿಸಿದ್ದಾರೆ.
ಇಂಡೋನೇಷ್ಯಾದ ಹವಾಮಾನ ಮತ್ತು ಭೂಗೋಳಶಾಸ್ತ್ರ ಏಜೆನ್ಸಿ, ಭೂಕಂಪವು 5.6 ರ ತೀವ್ರತೆಯನ್ನು ಹೊಂದಿತ್ತು ಮತ್ತು ಜಕಾರ್ತಾದಿಂದ ಸುಮಾರು 100 ಕಿಲೋಮೀಟರ್ (60 ಮೈಲುಗಳು) ಸಿಯಾಂಜೂರ್ ಬಳಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.
ರಾಜಧಾನಿಯಲ್ಲಿ ಯಾವುದೇ ಸಾವುನೋವುಗಳು ಅಥವಾ ಹೆಚ್ಚಿನ ಹಾನಿಯ ಬಗ್ಗೆ ವರದಿಯಾಗಿಲ್ಲ. ಭೂಮಿ ಕಂಪಿಸಿದ ಬಳಿಕ ಜನರು ಕಟ್ಟಡಗಳಿಂದ ಹೊರಬಂದಿದ್ದಾರೆ.
ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಗಾಬರಿಗೊಂಡ ಕಾರ್ಮಿಕರು ತಮ್ಮ ಕಟ್ಟಡಗಳಿಂದ ಹೊರಗೆ ಹೋಡಿಹೋದರು ಎನ್ನುತ್ತಾರೆ 22 ವರ್ಷದ ವಕೀಲರಾದ ಮಾಯಾದಿತಾ ವಾಲುಯೊ.
ನನ್ನ ಕೆಳಗಿರುವ ನೆಲ ಅಲುಗಾಡುತ್ತಿರುವಾಗ ನಾನು ಕೆಲಸ ಮಾಡುತ್ತಿದ್ದೆ. ನನಗೆ ಕಂಪನದ ಸ್ಪಷ್ಟ ಅನುಭವ ಉಂಟಾಯಿತು. ಅದು ಏನೆಂದು ತಿಳಿಯುವ ಹೊತ್ತಿಗೆ, ಅದು ಇನ್ನಷ್ಟು ಬಲವಾಯಿತು ಮತ್ತು ಸ್ವಲ್ಪ ಸಮಯದವರೆಗೆ ಹಾಗೆಯೇ ಇತ್ತು. ಈ ವೇಳೆ ನನ್ನ ತಲೆ ತಿರುಗಿದಂತಾಯಿತು ಮತ್ತು ನಾನು 14ನೇ ಮಹಡಿಯಿಂದ ಕೆಳಗೆ ಬರಬೇಕಿತ್ತು' ಎಂದು ಅವರು ಹೇಳಿದರು.
ಜಕಾರ್ತದಲ್ಲಿರುವ ತಮ್ಮ ಕಚೇರಿಯ ಗೋಪುರದಲ್ಲಿ ಕೆಲಸ ಮಾಡುತ್ತಿರುವ ಎಎಫ್‌ಪಿ ಪತ್ರಕರ್ತರಿಗೂ ಕಟ್ಟಡವನ್ನು ಕೂಡಲೇ ತೆರವು ಮಾಡುವಂತೆ ಆದೇಶಿಸಲಾಯಿತು.
ಪೆಸಿಫಿಕ್ 'ರಿಂಗ್ ಆಫ್ ಫೈರ್'ನಲ್ಲಿನ ತನ್ನ ಸ್ಥಾನದಿಂದಾಗಿ ಇಂಡೋನೇಷ್ಯಾವು ಆಗಾಗ್ಗೆ ಭೂಕಂಪನ ಮತ್ತು ಜ್ವಾಲಾಮುಖಿಯಂತಹ ನೈಸರ್ಗಿಕ ಅನುಭವಗಳನ್ನು ಪಡೆಯುತ್ತಲೇ ಇರುತ್ತದೆ.

.jpeg)
