ಕಾಸರಗೋಡು:ಉತ್ತರಾಖಂಡದಲ್ಲಿ ನಡೆಯಲಿರುವ 48ನೇ ಜೂನಿಯರ್ (ಬಾಲಕರ) ರಾಷ್ಟ್ರೀಯ ಚಾಂಪಿಯನ್‌ಶಿಪ್ ಮತ್ತು ಜಾರ್ಖಂಡ್‌ನಲ್ಲಿ ನಡೆಯಲಿರುವ 32ನೇ ಸಬ್ ಜೂನಿಯರ್ (ಬಾಲಕರ ಮತ್ತು ಬಾಲಕಿಯರ) ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಕೇರಳ ಕಬಡ್ಡಿ ತಂಡದ ಆಯ್ಕೆ ಟ್ರಯಲ್ಸ್ ನವೆಂಬರ್ 7 ಮತ್ತು 8 ರಂದು ಬೆಳಗ್ಗೆ 8 ರಿಂದ ಅಟ್ಟಿಂಗಲ್‌ನ ಶ್ರೀಪಾದಂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ವಯೋಮಿತಿ ಜೂನಿಯರ್ ಹುಡುಗರು 20ನೇ ನವೆಂಬರ್ 2022 ಕ್ಕೆ 20 ವರ್ಷ ಮೀರಬಾರದು. ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಯಸ್ಸು 31ನೇ ಡಿಸೆಂಬರ್ 2022 ಕ್ಕೆ 16 ವರ್ಷ ಮೀರಬಾರದು. ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ 3 ಭಾವಚಿತ್ರಗಳೊಂದಿಗೆ ಸಮಯಕ್ಕೆ ಸರಿಯಾಗಿ ಕ್ರೀಡಾಂಗಣಕದಲ್ಲಿ ಹಾಜರಿರಬೇಕು. ವಿವರಗಳಿಗೆ ದೂರವಾಣಿ 0471 2330167.

