HEALTH TIPS

ಅರ್ಜಿ ಆಹ್ವಾನ

ಇ-ಸರಕಾರದ ಭಾಗವಾಗಿ ಅನುಷ್ಠಾನಗೊಳಿಸುತ್ತಿರುವ ಇ-ಆಫೀಸ್ ಇ-ಡಿಸ್ಟ್ರಿಕ್ಟ್ ಯೋಜನೆಗೆ ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ಹ್ಯಾಂಡ್ ಹೋಲ್ಡ್ ಸಪೋರ್ಟ್ ಇಂಜಿನಿಯರ್‌ಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಬಿ.ಟೆಕ್ ( ಐಟಿ / ಕಂಪ್ಯೂಟರ್ ಸೈನ್ಸ್ / ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್) ಮತ್ತು ಎಂಎಸ್ಸಿ (ಕಂಪ್ಯೂಟರ್ ಸೈನ್ಸ್) ಪದವೀಧರರು ಸಿಸ್ಟಮ್/ನೆಟ್‌ವರ್ಕ್ ಇಂಜಿನಿಯರ್‌ಗಳಾಗಿ ಕನಿಷ್ಠ ಒಂದು ವರ್ಷದ ಅನುಭವ, 3 ವರ್ಷಗಳ ಡಿಪ್ಲೊಮಾ (ಹಾರ್ಡ್‌ವೇರ್/ಕಂಪ್ಯೂಟರ್/ಐಟಿ) 2 ವರ್ಷಗಳ ಸಿಸ್ಟಮ್ / ನೆಟ್‌ವರ್ಕ್ ಎಂಜಿನಿಯರ್‌ ಆಗಿ ಕೆಲಸ ಮಾಡಿದ ಅನುಭವ ಪಡೆದಿರುವ ಮಲಯಾಳ ಮತ್ತು ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

ಅರ್ಜಿದಾರರು ಜಿಲ್ಲೆಯ ಖಾಯಂ ನಿವಾಸಿಗಳಾಗಿದ್ದು  ಜಿಲ್ಲೆಯ ಎಲ್ಲಾ ಭಾಗಗಳಿಗೂ ಹೋಗಿ ಕೆಲಸ ಮಾಡಲು ಸಿದ್ಧರಿರಬೇಕು.  ವಯಸ್ಸಿನ ಮಿತಿ 30 ವರ್ಷಕ್ಕಿಂತ ಕಡಿಮೆ.  ಇ-ಆಡಳಿತ ಮತ್ತು ಸರಕಾರಿ ಯೋಜನೆಗಳಲ್ಲಿ ಕೆಲಸ ಮಾಡಿದ ಅನುಭವ,ವಿಂಡೋಸ್/ ಲಿನೆಕ್ಸ್ / ಮಾಕ್ ಒ ಎಸ್  ಎಂಬಿವುಗಳಲ್ಲಿ ಕೆಲಸದ ಅನುಭವ ಇರುವವರೆಗೆ ಆದ್ಯತೆ.  ಅರ್ಜಿಯನ್ನು ಜಿಲ್ಲಾಧಿಕಾರಿ (ಜಿಲ್ಲಾ ಐಟಿ ಸೆಲ್) ಕಲೆಕ್ಟರೇಟ್, ಕಾಸರಗೋಡು ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಕಾಸರಗೋಡು ಕಲೆಕ್ಟರೇಟ್‌ನ ಜಿ ಸೆಕ್ಷನ್‌ನಲ್ಲಿರುವ ಬಾಕ್ಸ್‌ನಲ್ಲಿ ನವೆಂಬರ್ 15 ರ ಸಂಜೆ 5 ಗಂಟೆಯವರೆಗೆ ಸಲ್ಲಿಸಬಹುದು.  ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ www.kasargod.nic.in

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries