HEALTH TIPS

ಮುಂಬೈ: 7.9 ಕೆ.ಜಿ ಹೆರಾಯಿನ್‌ ವಶ

 

                 ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಥಿಯೋಪಿಯಾದ ರಾಜಧಾನಿ ಅಡಿಸ್‌ ಅಬಾಬಾದಿಂದ ಬಂದಿದ್ದ ಪ್ರಯಾಣಿಕನಿಂದ 7.9 ಕೆ.ಜಿ. ಹೆರಾಯಿನ್‌ ಅನ್ನು ಗುಪ್ತಚರ ನಿರ್ದೇಶನಾಲಯವು ವಶಪಡಿಸಿಕೊಂಡಿದೆ.

                'ನಿರ್ದೇಶನಾಲಯದ ಅಧಿಕಾರಿಗಳು ಪ್ರಯಾಣಿಕನನ್ನು ತಡೆದು, ಆತನ ಬ್ಯಾಗ್‌ ಅನ್ನು ತಪಾಸಣೆ ನಡೆಸಿತು.ಬ್ಯಾಗ್‌ನಲ್ಲಿ ಕೆಲವು ಬ್ರೌನ್‌ ಪೌಡರ್‌ ಇದ್ದ ಪ್ಯಾಕೆಟ್‌ಗಳು ದೊರೆಯಿತು. ಪರೀಕ್ಷೆಯ ಬಳಿಕ ಈ ಪ್ಯಾಕೆಟ್‌ಗಳಲ್ಲಿ ಇದ್ದದ್ದು ಹೇರಾಯಿನ್‌ ಎಂದು ತಿಳಿದುಬಂದಿದೆ' ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.

                   'ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 7.9 ಕೆ.ಜಿ ಹೆರಾಯಿನ್‌ಗೆ ₹50 ಕೋಟಿ ಬೆಲೆ ಇದೆ. ಪ್ರಯಾಣಿಕನನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ. ವಿಚಾರಣೆಯು ಪ್ರಗತಿಯಲ್ಲಿದೆ. ಇದರ ಹಿಂದೆ ದೊಡ್ಡದೊಂದು ಕಳ್ಳಸಾಗಣೆ ಜಾಲ ಇದ್ದಂತಿದೆ' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries