ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಕೇರಳೋತ್ಸವದಂಗವಾಗಿ ನಡೆಸಲಾಗುವ ಕ್ರೀಡೋತ್ಸವಕ್ಕೆ ಸೋಮವಾರ ಸಂಜೆ ಚಾಲನೆ ನೀಡಲಾಯಿತು. ಮಲಂಗರೆ ಕ್ರೀಡಾಂಗಣದಲ್ಲಿ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕೇರಳೋತ್ಸವದ ಪಂಚಾಯತಿ ಮಟ್ಟದ ಉದ್ಘಾಟನೆ ನಡೆಸಿ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಂ.ಸದಸ್ಯ ಶಶಿಧರ ಕಾಟುಕುಕ್ಕೆ, ಪಂಚಾಯತಿ ಹೆಡ್ ಕ್ಲಾರ್ಕ್ ಪ್ರೇಮ್ ಚಂದ್ , ಕೇರಳೋತ್ಸವದ ಸಂಯೋಜಕ ಫಾರೂಕ್ ಪಳ್ಳಂ, ಜನಾರ್ಧನ ರೈ ಸೇರಾಜೆ ಮೊದಲಾದವರು ಉಪಸ್ಥಿತರಿದ್ದರು. ಆಶ್ರಫ್ ಮಲಂಗರೆ ಸ್ವಾಗತಿಸಿ, ಯೂಸುಫ್ ಮಲಂಗರೆ ವಂದಿಸಿದರು. ನವಾಸ್ ಮತ್ರ್ಯ ನಿರೂಪಿಸಿದರು.
ಬಳಿಕ ಮಾಸ್ಕ್ ಮಲಂಗರೆ ನೇತೃತ್ವದಲ್ಲಿ ಆಯೋಜಿಸಿದ ಪಂಚಾಯತಿ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ 10 ತಂಡಗಳು ಭಾಗವಹಿಸಿತ್ತು. ಪಂದ್ಯಾಟದಲ್ಲಿ ಫ್ರೆಂಡ್ಸ್ ಮಲಂಗರೆ ಪ್ರಥಮ ಹಾಗೂ ನೇತಾಜಿ ಪೆರ್ಲ ದ್ವಿತೀಯ ಸ್ಥಾನ ಪಡೆದುಕೊಂಡಿತು.
ನ.15ಕ್ಕೆ ಬೆಳಿಗ್ಗೆ 9.30 ರಿಂದ ಪಳ್ಳಂ ತಮರ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ, ನ.16ಕ್ಕೆ ಸಂಜೆ 5 ರಿಂದ ಬಜಕೂಡ್ಲಿನ ಪಂಚಾಯತಿ ಮಿನಿ ಸ್ಟೇಡಿಯಂನಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ, ನ.17ಕ್ಕೆ ಮಧ್ಯಾಹ್ನ 2.30 ಗಂಟೆಗೆ ಬೆದ್ರಂಪಳ್ಳ ಮೈದಾನದಲ್ಲಿ ವಾಲಿಬಾಲ್ ಪಂದ್ಯಾಟ, ನ.18ಕ್ಕೆ ಮಧ್ಯಾಹ್ನ 1.30 ರಿಂದ ಪಂಚಾಯತಿ ಸಭಾಂಗಣದಲ್ಲಿ ವೇದಿಕೆಯೇತರ ಸ್ಪರ್ಧೆಗಳು, ನ.18ಕ್ಕೆ ಮಧ್ಯಾಹ್ನ 4 ಗಂಟೆಯಿಂದ ಪೆರ್ಲ ಶಂಕರ ಸದನದಲ್ಲಿ ಬ್ಯಾಟ್ ಮಿಂಟನ್ ಹಾಗೂ ಚೆಸ್ ಸ್ಪರ್ಧೆ ನಡೆಯಲಿದೆ. ನ.19ಕ್ಕೆ ಬೆಳಿಗ್ಗೆ 9.30 ರಿಂದ ಕಾಟುಕುಕ್ಕೆ ಶಾಲಾ ಮೈದಾನದಲ್ಲಿ ಆಟೋಟ ಸ್ಪರ್ಧೆ ಹಾಗೂ ಮಧ್ಯಾಹ್ನ 1.30 ರಿಂದ ಪುಟ್ಬಾಲ್ ಸ್ಪರ್ಧೆ ನಡೆಯಲಿದೆ. ನ.20 ರಂದು ಎಣ್ಮಕಜೆ ಪಂಚಾಯತಿ ಸಭಾಂಗಣದಲ್ಲಿ ಬೆಳಿಗ್ಗೆ 9.30ರಿಂದ ಸಾಂಸ್ಕøತಿಕ ಸ್ಪರ್ಧೆಗಳು ಜರಗಲಿದೆ. ಅಂದು ಸಂಜೆ 5 ಗಂಟೆಗೆ ಕೇರಳೋತ್ಸವದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಜರಗಲಿದೆ.

.jpg)
.jpg)
