ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಸ್ವರ್ಗ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಸೋಮವಾರ ಆಚರಿಸಲಾಯಿತು. ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ರಾಮಚಂದ್ರ ಎಂ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಅಂಗನವಾಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ವಾಣೀನಗರ ವಹಿಸಿದರು. ಸಭೆಯಲ್ಲಿ ಪಡ್ರೆ ಗ್ರಾಮಾಧಿಕಾರಿ ಶಂಕರ್ ಕುಂಜತ್ತೂರು, ಮಂಜೇಶ್ವರ ಎ.ಡಿ.ಎಸ್. ಸಿ.ಡಿ.ಪಿ.ಒ ಲೀನಾ ಹರಿದಾಸ್, ಎಣ್ಮಕಜೆ ಗ್ರಾಮ ಪಂಚಾಯತಿ ಮೇಲ್ವಿಚಾರಕಿ ಪ್ರೇಮ, ವಾಣೀನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಲ್ತ್ ಇನ್ಸ್ ಪೆಕ್ಟರ್ ಹರೀಶ್, ಸೂರಜಾ, ಪಡ್ರೆ ಸಹಾಯಕ ಗ್ರಾಮಾಧಿಕಾರಿ ಜಗದೀಶ್, ಸಾಮಾಜಿಕ ಮುಂದಾಳು ಪಿ.ಯಸ್ ಕಡಂಬಳಿತ್ತಾಯ ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ,ಹೆತ್ತವರಿಗೆ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಳೆದ ಹತ್ತು ವರ್ಷಗಳಿಂದ ವಾರ್ಡಿನಲ್ಲಿ ಆರೋಗ್ಯ ಸಹಾಯಕಿಯಾಗಿ ಸೇವೆಯನ್ನು ಸಲ್ಲಿಸಿ ಭಡ್ತಿ ಹೊಂದಿದ ಸೂರಜಾ ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮಕ್ಕಳು ಹೆತ್ತವರೊಂದಿಗೆ ಅಂಗನವಾಡಿ ಪರಿಸರದಿಂದ ಸ್ವರ್ಗ ಪೇಟೆಗೆ ಆಕರ್ಷಕ ಮೆರವಣಿಗೆ ನಡೆಸಿದರು. ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಎಂ ಸ್ವಾಗತಿಸಿ, ಕುಟುಂಬಶ್ರೀ ಸಿ.ಡಿ.ಎಸ್ ಉಪಾಧ್ಯಕ್ಷೆ ಶಶಿಕಲಾ ಕೆ ವಂದಿಸಿದರು. ಮಲ್ಲಿಕಾ ವಾಲ್ತಜೆ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
.jpg)
