ಪೆರ್ಲ: ಸವಿ ಹೃದಯದ ಕವಿ ಮಿತ್ರರು ಪೆರ್ಲ ನೇತೃತ್ವದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ "ಹಿರಿಯರೊಂದಿಗೆ ಕಿರಿಯರು" ಎಂಬ ಧ್ಯೇಯ ವಾಕ್ಯದಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರ ಅಂಗವಾಗಿ ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕರ ಸ್ವಗೃಹ ‘ದೃಶ್ಯ’ಕ್ಕೆ ಭೇಟಿ ನೀಡಿದ ಮಕ್ಕಳು ಹಾಗೂ ಸಾಹಿತ್ಯಾಸಕ್ತರು ಅವರ ಅನುಭವ ಹಾಗೂ ಬದುಕಿನ ಬಗ್ಗೆ ಅವಲೋಕನ ನಡೆಸಿದರು.
ಉಳಿಯತ್ತಡ್ಕರ ಮನೆಯಲ್ಲಿ ಜೋಡಿಸಿಟ್ಟ ಗ್ರಂಥಾಲಯಕ್ಕೆ ಭೇಟಿ ನೀಡಿದ ಮಕ್ಕಳು ಪುಸ್ತಕ ರಚನೆ ಹಾಗೂ ಪ್ರಕಾಶನದ ಬಗ್ಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಾದ ಸ್ವಾತಿ ಕೆ.ಆರ್. ಕಾರ್ಯಾಡು, ಗ್ರೀμÁ್ಮ ಬಿ,ಹರ್ಷಿತಾ, ದೀಪಿಕಾ ಎಂ, ಅಜಿತ್ ಸಿ. ಲಿಖಿತ್ ಪಿ, ಸ್ಕಂದ ಕಾಟುಕುಕ್ಕೆ, ದೀಕ್ಷಾ, ಹರ್ಷಿತಾ ಪರ್ಪಕರಿಯ ಮೊದಲಾದವರು ಹಿರಿಯ ಕವಿಗಳೊಂದಿಗೆ ಸಂದರ್ಶನ ನಡೆಸಿದರು. ಕವಿ ಸುಂದರ ಬಾರಡ್ಕ, ದಿವ್ಯಾ ಗಟ್ಟಿ ಉಳಿಯ, ವನಜಾಕ್ಷಿ ಚಂಬ್ರಕಾನ, ಚಂದ್ರಕಲಾ ಪುಳ್ಕೂರು, ಸಂಘಟಕ ರಾಮ ಪಟ್ಟಾಜೆ,ನಿವೃತ್ತ ಕೋಸ್ಟಲ್ ಗಾರ್ಡ್ ಎಸ್.ಐ.ಪರಮೇಶ್ವರ ನಾಯ್ಕ ಬಾಳೆಗುಳಿ, ಚಂದ್ರಹಾಸ ಮಾಸ್ತರ್ ಕಾಟುಕುಕ್ಕೆ,ಚಂದ್ರ ಆರ್ಲಪದವು, ಕೃಷ್ಣ ಕಾರ್ಯಾಡು, ಐತ್ತಪ್ಪ ಪೆರ್ಲ ಮೊದಲಾದವರು ಭಾಗವಹಿಸಿದ್ದರು. ಕವಿ, ಉಪನ್ಯಾಸಕ ಬಾಲಕೃಷ್ಣ ಬೇರಿಕೆ ಸ್ವಾಗತಿಸಿ, ಸವಿ ಹೃದಯದ ಕವಿ ಮಿತ್ರರ ಸಂಚಾಲಕ ಸುಭಾμï ಪೆರ್ಲ ವಂದಿಸಿದರು.

.jpg)
.jpg)
