ಬದಿಯಡ್ಕ: ಎರ್ನಾಕುಳಂನಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನೋತ್ಸವದ ವಾಲಿಬಾಲ್ ನೆಟ್ ಮೇಕಿಂಗ್ ಹೈಸ್ಕೂಲ್ ವಿಭಾಗದ ಸ್ಪರ್ಧೆಯಲ್ಲಿ ಅಮಿಷ ಮರಿಯಂ ಪೆರ್ಲ ‘ಎ’ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾಳೆ. ಮತ್ತು ರಾಜ್ಯಮಟ್ಟದಲ್ಲಿ ಭಾಗವಹಿಸಿ ಎ ಗ್ರೇಡ್ ಪಡೆದ ಸಮೃತ ಎಂ, ದೇವನಂದ ಮತ್ತು ಜಿಷ್ಣು ಇವರಿಗೆ ಮುಖ್ಯೋಪಾಧ್ಯಾಯನಿ ಮಿನಿ ಟೀಚರ್ ಮತ್ತು ಅಧ್ಯಾಪಕರ ನೇತೃತ್ವದಲ್ಲಿ ಮೆರವಣಿಯ ಮೂಲಕ ಎನ್.ಸಿ.ಸಿ ಘಟಕದ ಬ್ಯಾಂಡ್ ವಾದ್ಯದ ಮೂಲಕ ಸ್ವಾಗತಿಸಿ ಅಭಿನಂದಿಸಲಾಯಿತು. ಶಾಲಾ ಆಡಳಿತ ಮಂಡಳಿ, ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
ರಾಜ್ಯಮಟ್ಟದ ವಿಜ್ಞಾನೋತ್ಸವದಲ್ಲಿ ಪ್ರಥಮ: ವಿದ್ಯಾರ್ಥಿಗಳಿಗೆ ಅಭಿನಂದನೆ
0
ನವೆಂಬರ್ 15, 2022
Tags

.jpg)
.jpg)
