ಬದಿಯಡ್ಕ : ಎಡನೀರು ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರದ ಕಾರ್ಯ ಆರಂಭವಾಗಿದ್ದು, ಯುವಜನ ಸಮಿತಿ ರೂಪೀಕರಣ ಸಭೆ ಭಾನುವಾರ ಶ್ರೀ ಕ್ಷೇತ್ರದ ಪರಿಸರದಲ್ಲಿ ಜರಗಿತು. ನವೀನ ಕುಮಾರ ಭಟ್ ಕುಂಜರಕಾನ ಅಧ್ಯಕ್ಷತೆ ವಹಿಸಿ ಕ್ಷೇತ್ರ ನಿರ್ಮಾಣ ಹಾಗೂ ಮುಂದಿನ ಕೆಲಸದ ಬಗ್ಗೆ ಮಾಹಿತಿ ನೀಡಿದರು. ರಾಜನ್ ಮುಳಿಯಾರ್, ಕೆ.ವಿ.ಬಾಲಕೃಷ್ಣ ಆಚಾರ್ಯ, ವಾಮನ ಆಚಾರ್ಯ ಬೋವಿಕ್ಕಾನ, ವಾಸುದೇವ ಭಟ್ ಚೂರಿಮೂಲೆ ಮೊದಲಾದವರು ಮಾತನಾಡಿದರು. ಕೆ.ಎಂ. ಶರ್ಮ ಎಡನೀರು ಸ್ವಾಗತಿಸಿ, ವಿವಿಧ ಸಮಿತಿಗಳ ರೂಪೀಕರಣದ ಮಾಹಿತಿಯನ್ನು ನೀಡಿದರು. ಸತೀಶ್ ಕೆಮ್ಮಂಗಯ ವಂದಿಸಿದರು.
ಯುವಜನ ಸಮಿತಿಗೆ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ ರಾಜನ್ ಮುಳಿಯಾರು, ಪ್ರ.ಕಾರ್ಯದರ್ಶಿಯಾಗಿ ಪ್ರಶಾಂತ್ ಕಲ್ಲುಗದ್ದೆ, ಖಜಾಂಜಿಯಾಗಿ ಹರೀಶ್ ಚಾಪಾಡಿ, ಉಪಾಧ್ಯಕ್ಷರಾಗಿ ಹರಿಪ್ರಸಾದ್ ಕೆ.ಕೆ.ಪುರಂ, ಸುರೇಶ್ ಬಾಬು ಕಾನತ್ತೂರು, ಪ್ರಸಾದ ಬೇವಿಂಜೆ, ಅಗ್ನೇಷ್ ಕಳೇರಿ, ಕೃಷ್ಣ ಚಾಪಾಡಿ, ಜೊತೆಕಾರ್ಯದರ್ಶಿಗಳಾಗಿ ಸತೀಶ್ ಕೆಮ್ಮಂಗಾಯ, ಕೃಷ್ಣ ಬೋಳುಗುಡ್ಡೆ, ಸಂಜೀವ ಚೆಂಬೈಲ್, ರಂಜಿತ್ ಕೆ.ಕೆ.ಪುರಂ, ಸತೀಶ್ ಚಾಪಾಡಿ ಹಾಗೂ ಹಾಜರಿದ್ದ ಭಕ್ತಾದಿಗಳನ್ನು ಸಮಿತಿಯ ಸದಸ್ಯರನ್ನಾಗಿ ಆರಿಸಲಾಯಿತು.
ಎಡನೀರು ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಯುವಜನ ಸಮಿತಿ ರೂಪೀಕರಣ ಸಭೆ
0
ನವೆಂಬರ್ 08, 2022

.jpg)
