ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮತ್ತು ವಿದ್ಯಾವರ್ಧಕ ಎಯುಪಿ ಶಾಲೆಗಳಲ್ಲಿ ನವೆಂಬರ್ 22 ರಿಂದ 25ರವರೆಗೆ ನಡೆಯಲಿರುವ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಲಾಂಛನವನ್ನು ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅವರು ಮಂಗಳವಾರ ಶಾಲೆಯಲ್ಲಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಶಾಲಾ ಕಲೋತ್ಸವದ ಮನವಿ ಪತ್ರವನ್ನು ಶಾಲಾ ಪಿಟಿಎ ಅಧ್ಯಕ್ಷ ಜನಾರ್ದನ ಅವರಿಗೆ ನೀಡುವುದರೊಂದಿಗೆ ಅದಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾದ್ಯಕ್ಷ ಜಯರಾಮ ಬಲ್ಲಂಗುಡೆಲು, ಸದಸ್ಯ ಸೂರ್ಯನಾರಾಯಣ ಮಯ್ಯ, ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಸಂಚಾಲಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮುಖ್ಯೋಪಾಧ್ಯಾಯ ಶಿವಶಂಕರ ಭಟ್, ವಿದ್ಯಾವರ್ಧಕ ಎಯುಪಿ ಶಾಲಾ ಸಂಚಾಲಕ ಶ್ರೀಧರ್ ರಾವ್, ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಮತ್ತು ಎಲ್ಲಾ ಕನ್ವಿನರ್ ಗಳು ಉಪಸ್ಥಿತರಿದ್ದರು.
ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಲಾಂಛನ ಮತ್ತು ಮನವಿ ಪತ್ರ ಬಿಡುಗಡೆ
0
ನವೆಂಬರ್ 08, 2022
Tags

.jpg)
