ಕಾಸರಗೋಡು: ಜಗತ್ತಿನ ಅತಿ ದೊಡ್ಡ ಪುಸ್ತಕೋತ್ಸವ ಶಾರ್ಜಾ ಇಂಟರ್‍ನ್ಯಾಶನಲ್ ಬುಕ್ ಫೆಸ್ಟ್‍ನಲ್ಲಿ ಕಾಞಂಗಾಡ್‍ನ ಕವಿ ನಾಳಪಾಡಂ ಪದ್ಮನಾಭನ್ ಅವರ 31ನೇ ಪುಸ್ತಕ ತೆಯ್ಯಂ ಕವಿತಾ ಸಂಕಲನ ಬಿಡುಗಡೆ ಮಾಡಲಾಯಿತು. ಪದ್ಮಶ್ರೀ ವ್ಯವಸ್ಥಾಪಕ ನಿರ್ದೇಶಕಿ ಬಿಂದು ಇಡಯಿಲ್ಲಂ ಅವರು ಗೀತಾ ಮೋಹನ್ ಕುಮಾರ್ ಅವರಿಗೆ ಪುಸ್ತಕ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು. ಡಾ. ಮಣಿಕಂಠನ್ ಅಧ್ಯಕ್ಷತೆ ವಹಿಸಿದ್ದರು. ಪಿ.ಕೆ.ಬಾಬು ಕೃತಿ ವಿಮರ್ಶೆ ನಡೆಸಿದರು. ಚಿತ್ರನಟಿ ಮಾನಸ ಮನೋಜ್ ಪದ್ಮಶ್ರೀ ಪುಸ್ತಕನಿಧಿ ಸ್ವೀಕರಿಸಿದರು. ಮಾತೃಭೂಮಿ ಶಾರ್ಜಾ ವರದಿಗಾರ ಇ.ಟಿ. ಪ್ರಕಾಶ್ ಸ್ವಾಗತಿಸಿ, ಕವಿ ಗಂಗಾಧರನ್ ರಾವಣೇಶ್ವರಂ ಶುಭಾಂಸನೆಗೈದರು. ಚೆರಿಯನ್ ಥಾಮಸ್ ಸ್ವಾಗತಿಸಿದರು. ಮ್ಯಾಕ್ ಬೆತ್ ಎಂ.ಡಿ ಮತ್ತು ಶಹನಾಜ್ ಎಂ.ಎ. ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಕವಿ ನಾಳಪಾಡಂ ಪದ್ಮನಾಭನ್ ವಂದಿಸಿದರು.
ಪದ್ಮನಾಭನ್ ಅವರ ತೆಯ್ಯಂ ಕವಿತಾ ಪುಸ್ತಕ ಬಿಡುಗಡೆ
0
ನವೆಂಬರ್ 08, 2022

.jpeg)
