HEALTH TIPS

ಮನೆಯಲ್ಲಿ ಕಳ್ಳಿ ಸಸ್ಯಗಳನ್ನು ಬೆಳೆಸುವುದರಿಂದ ಸಿಗಲಿದೆ ಈ ಅದ್ಭುತ ಲಾಭಗಳು!

 ಗಿಡ-ಗಾರ್ಡೆನಿಂಗ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಪ್ರತಿಯೊಬ್ಬರೂ ಇಷ್ಟಪಡುವ ವಿಚಾರಗಳಲ್ಲಿ ಈ ಗಿಡ ಬೆಳೆಸುವುದು ಸಹ ಒಂದು. ಆದರೆ, ಇತ್ತೀಚಿನ ದಿನಗಳಲ್ಲಿ ಮನೆಯೊಳಗೆ ಸಸ್ಯಗಳನ್ನು ಬೆಳೆಸುವುದು ಒಂದು ರೀತಿಯ ಟ್ರೆಂಡ್ ಆಗಿದೆ. ಅದರಲ್ಲೂ ಒಳಾಂಗಣ ಗಾರ್ಡೆನಿಂಗ್‌ಗೆ ಕಳ್ಳಿ ಅಥವಾ ರಸಭರಿತ ಸಸ್ಯಗಳು ಫೇಮಸ್. ಕಾಂಡಗಳು ಮತ್ತು ಎಲೆಗಳಲ್ಲಿ ನೀರನ್ನು ಸಂಗ್ರಹಿಸುವ ಈ ಸಸ್ಯಗಳು ಮನೆಯ ಅಂದವನ್ನಷ್ಟೇ ಅಲ್ಲ, ಹಲವಾರು ಅನುಕೂಲಗಳನ್ನು ನೀಡುತ್ತವೆ. ಅವುಗಳು ಯಾವುವು ಎಂಬುದನ್ನ ಇಲ್ಲಿ ನೋಡೋಣ.

ನಿಮ್ಮ ಮನೆಯಲ್ಲಿ ರಸಭರಿತ ಅಥವಾ ಕಳ್ಳಿ ಸಸ್ಯಗಳನ್ನು ಬೆಳೆಯುವ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಯಾವುದೇ ಹವಾಮಾನದಲ್ಲೂ ಬೆಳೆಯಬಹುದು

ರಸಭರಿತ ಅಥವಾ ಕಳ್ಳಿ ಸಸ್ಯಗಳು ವೈವಿಧ್ಯಮಯ ಹವಾಮಾನಗಳಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿರುತ್ತವೆ. ಇದೇ ಕಾರಣದಿಂದ, ಈ ಕಳ್ಳಿ ಸಸ್ಯಗಳು ಕಡಲತೀರದ ಬಂಡೆಗಳು ಮತ್ತು ಆರ್ದ್ರ ಕಾಡುಗಳಿಂದ ಹಿಡಿದು, ಒಣ ಮರುಭೂಮಿಗಳು ಮತ್ತು ಶೀತ ಪರ್ವತಗಳವರೆಗೆ ಎಲ್ಲಾ ಕಡೆಯಲ್ಲೂ ಕಂಡುಬರುವುದು. ಅದೇ ರೀತಿ, ಮನೆಯ ಕೋಣೆಯ ಉಷ್ಣಾಂಶದಲ್ಲಿ ಯಾವುದೇ ಅಡೆತಡೆಯಿಲ್ಲದೇ ಬೆಳೆಯುತ್ತವೆ. ಯಾವುದೇ ಹವಾಮಾನವಿದ್ದರೂ ಮನೆಗೆ ಹಸಿರು ಕಳೆ ತರುವುದರಲ್ಲಿ ಯಾವುದೇ ಸಂಶಯವಿಲ್ಲ.

2. ಗಾಳಿಯನ್ನು ಶುದ್ಧೀಕರಿಸಲು ಸಹಕಾರಿ

" ಪ್ಲಾಂಟ್ಸ್ ಕ್ಲೀನ್ ಏರ್ ಮತ್ತು ವಾಟರ್ ಫಾರ್ ಇಂಡೋರ್ ಎನ್ವಿರಾನ್ಮೆಂಟ್ಸ್ " ಎಂಬ ಲೇಖನದಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಕಳ್ಳಿ ಸಸ್ಯಗಳು ಗಾಳಿಯಿಂದ ಅನೇಕ ಬಾಷ್ಪಶೀಲ ಸಾವಯವ ಸಂಯುಕ್ತಗಳು ಅಂದರೆ, ಗಾಳಿಯಲ್ಲಿರುವ ಕಲ್ಮಶಗಳನ್ನು ತೆಗೆದುಹಾಕಬಹುದು ಎಂದು ಹೇಳುತ್ತದೆ. ಈ ಸಸ್ಯಗಳು ಗಾಳಿಯಲ್ಲಿರುವ ಕಲ್ಮಶಗಳನ್ನು ತಮ್ಮ ಬೇರುಗಳ ಬಳಿ ಎಳೆದುಕೊಂಡು, ತಮ್ಮ ಆಹಾರವಾಗಿ ಪರಿವರ್ತಿಸುತ್ತದೆ, ಇದರಿಂದಾಗಿ ನಿಮ್ಮ ಮನೆಯ ಗಾಳಿ ಶುದ್ಧೀಕರಣಗೊಳ್ಳುತ್ತದೆ.

3. ಮನೆಯ ತೇವಾಂಶವನ್ನು ಸುಧಾರಿಸುವುದು

ಕಳ್ಳಿ ಸಸ್ಯಗಳು ನೀರನ್ನು ಬಿಡುಗಡೆ ಮಾಡುವುದರಿಂದ, ಅವು ನಿಮ್ಮ ಮನೆಯ ತೇವಾಂಶವನ್ನು ಹೆಚ್ಚಿಸುತ್ತವೆ. ಹೆಚ್ಚಿದ ತೇವಾಂಶದ ಪ್ರತಿಯಾಗಿ, ನಿಮಗೆ ಎದುರಾಗುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ಗಂಟಲು ನೋವು, ಶೀತ, ಕೆಮ್ಮು, ತುರಿಕೆ ಮೊದಲಾದವುಗಳನ್ನು ಸುಧಾರಿಸಬಹುದು:

4. ಫ್ರೆಶ್ ಆಮ್ಲಜನಕವನ್ನು ಸೇರಿಸಬಹುದು

ಇತರ ಸಸ್ಯಗಳಂತೆ, ರಸಭರಿತ ಅಥವಾ ಕಳ್ಳಿ ರಾತ್ರಿಯಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುವುದಿಲ್ಲ. ಬದಲಾಗಿ, ಇವು ಆಮ್ಲಜನಕವನ್ನು ಉತ್ಪಾದಿಸುವುದನ್ನು ಮುಂದುವರಿಸುತ್ತವೆ. ಆಮ್ಲಜನಕದ ಈ ನಿರಂತರ ಸ್ಫೋಟವು ನಿಮ್ಮ ಮನೆಯ ಗಾಳಿಯನ್ನು ತಾಜಾಗೊಳಿಸಿ ಉಸಿರಾಟವನ್ನು ಸುಧಾರಿಸುತ್ತದೆ. ಆದ್ದರಿಂದ ಈ ಸಸ್ಯಗಳನ್ನ ಬಾತತರೂಮ್ ಅಥವಾ ಅಡುಗೆಮನೆಯಂತಹ ತಾಜಾ ಗಾಳಿ ಬೇಕು ಎಂದು ಭಾವಿಸುವ ಕೋಣೆಗಳಲ್ಲಿ ಇಡುವುದು ಒಳ್ಳೆಯದು.

5. ಹೆಚ್ಚಿನ ನಿರ್ವಹಣೆಯ ಅಗತ್ಯವಿಲ್ಲ

ಹೌದು, ಇತರ ಸಸ್ಯಗಳಂತೆ ಈ ಕಳ್ಳಿ ಸಸ್ಯಗಳಿಗೆ ಹೆಚ್ಚಿನ ಆರೈಕೆಯ ಅಗತ್ಯವಿಲ್ಲ. ಅಂದರೆ ಪದೇ ಪದೇ ನೀರು, ಗೊಬ್ಬರದ ಅವಶ್ಯಕತೆಯಿರುವುದಿಲ್ಲ. ಅವುಗಳು ತನ್ನಷ್ಟಕ್ಕೆ ಬೆಳೆಯುತ್ತವೆ. ಕೆಲವೊಂದು ಕಳ್ಳಿ ಸಸ್ಯಗಳನ್ನು ಮನೆಯೊಳಗೂ ಆರಾಮವಾಗಿ ಬೆಳೆಯಬಹುದು. ಜೊತೆಗೆ ನಿಮ್ಮ ಮನೆಗೆ ಟ್ರೆಂಡಿ ಲುಕ್ ನೀಡುತ್ತದೆ. ಸದಾ ಹಸಿರಾಗಿರುವ ಈ ಗಿಡಗಳು, ಮನೆಯೊಳಗೆ ತಾಜಾತನವನ್ನು ತುಂಬಿರುವಂತೆ ಮಾಡುತ್ತವೆ.

6. ನೋವನ್ನು ಕಡಿಮೆ ಮಾಡಬಹುದು

ಅರೇ, ಮನೆಯಲ್ಲಿ ಕಳ್ಳಿ ಸಸ್ಯ ಇರೋದ್ರಿಂದ ನೋವು ಕಡಿಮೆಯಾಗುತ್ತಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ಕಾನ್ಸಾಸ್ ವಿಶ್ವವಿದ್ಯಾನಿಲಯವು ನಡೆಸಿದ ತೋಟಗಾರಿಕಾ ಚಿಕಿತ್ಸಾ ಸಂಶೋಧನೆಯ ಪ್ರಕಾರ, ಕೆಲವು ರೋಗಿಗಳು ತಮ್ಮ ಆಸ್ಪತ್ರೆಯ ಕೊಠಡಿಗಳಲ್ಲಿ ಈ ಸಸ್ಯಗಳನ್ನು ಹೊಂದಿದ್ದರಿಂದ, ನೋವಿನ ಔಷಧಿಗಳನ್ನು ಕಡಿಮೆ ತೆಗೆದುಕೊಂಡಿದ್ದಾರೆ ಎಂದು ಕಂಡುಹಿಡಿದಿದೆ.

7. ನೆನಪಿನ ಶಕ್ತಿಯನ್ನು ವೃದ್ಧಿಸಬಹುದು

ಮಿಚಿಗನ್ ವಿಶ್ವವಿದ್ಯಾನಿಲಯವು ನಡೆಸಿದ ಸೈಕಾಲಜಿ ಸಂಶೋಧನೆಯು ಪ್ರಕೃತಿಯೊಂದಿಗೆ ಸಂವಹನ ನಡೆಸುವುದರಿಂದ ಮೆದುಳಿಗೆ ಸಂಬಂಧಿಸಿದ ಅನೇಕ ಪ್ರಯೋಜನಗಳಿಗೆ ಎಂಬುದನ್ನು ತಿಳಿಸುತ್ತದೆ. ಅಂದರೆ ಉದ್ಯಾನವನದಲ್ಲಿ ನಡೆಯುವುದು, ಮನೆಯಲ್ಲಿ ಸಸ್ಯಗಳನ್ನು ಬೆಳೆಸುವುದು ಅಥವಾ ಸಸ್ಯವರ್ಗದ ಛಾಯಾಚಿತ್ರಗಳನ್ನು ನೋಡುವುದು. ಪ್ರಕೃತಿಯಲ್ಲಿ ಒಂದು ಗಂಟೆ ಕಳೆದ ನಂತರ ಮೆದುಳಿನ ಶಕ್ತಿಯು ಇಪ್ಪತ್ತು ಪ್ರತಿಶತದಷ್ಟು ಸುಧಾರಿಸುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ನಿಮ್ಮ ಅಧ್ಯಯನ ಅಥವಾ ಲೈಬ್ರರಿ, ನಿಮ್ಮ ಹೋಮ್ ಆಫೀಸ್ ಅಥವಾ ನಿಮ್ಮ ಮಕ್ಕಳು ಸಾಮಾನ್ಯವಾಗಿ ತಮ್ಮ ಮನೆಕೆಲಸವನ್ನು ಮಾಡುವ ಕೋಣೆಯಲ್ಲಿ ರಸಭರಿತ ಸಸ್ಯಗಳನ್ನು ಇಡುವುದು ಉತ್ತಮ ಉಪಾಯವಾಗಿದೆ.


 

 

 

 

 

 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries