HEALTH TIPS

ಕಮ್ಯುನಿಸ್ಟ್ ಪಕ್ಷದಲ್ಲೂ ಪುರುಷಾಧಿಪತ್ಯ: ಅತೃಪ್ತಿ ವ್ಯಕ್ತಪಡಿಸಿದ ಬೃಂದಾ ಕಾರಟ್


           ತಿರುವನಂತಪುರ: ಕಮ್ಯುನಿಸ್ಟ್ ಪಕ್ಷದಲ್ಲಿಯೂ ಪುರುಷಾಧಿಪತ್ಯ ಪ್ರಬಲವಾಗಿದೆ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಹೇಳಿದ್ದಾರೆ.
            ಪಕ್ಷದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಎತ್ತಿ ತೋರಿಸುವ ಮೂಲಕ ಸಿಪಿಎಂ ನಾಯಕರ ಟೀಕೆ ಮಾಡಲಾಗಿದೆ. ಪಕ್ಷದ ರ್ಯಾಲಿಗಳಲ್ಲಿ ಮಹಿಳೆಯರು ಭಾಗವಹಿಸಿದರೂ ಸಮಿತಿಗಳಲ್ಲಿ ಅವರ ಸಂಖ್ಯೆ ತೀರಾ ಕಡಿಮೆ. ಪುರುಷಮತ್ತು ಮಹಿಳೆಯರ ಸಮಾನ ಭಾಗವಹಿಸುವಿಕೆ ಖಾತ್ರಿಯಾಗುವವರೆಗೆ ಹೋರಾಟ ನಡೆಸಲಾಗುವುದು. ಕೋಝಿಕ್ಕೋಡ್‍ನ ದಯಾಪುರಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ‘ಮಹಿಳೆ, ಭಾರತದ ಕಲ್ಪನೆ ಮತ್ತು ನಾಳಿನ ರಾಜಕೀಯ’ ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಬೃಂದಾ ಕಾರಟ್ ಮುಖ್ಯ ಭಾಷಣ ಮಾಡುತ್ತಿದ್ದರು.
           ಎಲ್ಲ ರಾಜಕೀಯ ಪಕ್ಷಗಳಲ್ಲೂ ಪುರುಷಾಧಿಪತ್ಯ  ಚಾಲ್ತಿಯಲ್ಲಿದೆ. ಇದರಲ್ಲಿ ದೊಡ್ಡ ಬದಲಾವಣೆ ತರಲು ಯತ್ನಿಸುತ್ತಿರುವ ಸಿಪಿಎಂನಲ್ಲಿಯೂ ಮಹಿಳೆಯರ ಸದಸ್ಯತ್ವ ಶೇ.18-20ಕ್ಕಿಂತ ಕಡಿಮೆ ಇದೆ. ಮಹಿಳೆಯರು ರ್ಯಾಲಿಗಳಲ್ಲಿ ಭಾಗವಹಿಸುತ್ತಾರೆ. ಆದರೆ ಕಲಾಪದಲ್ಲಿ ಕಾಣುವ ಪಾಲ್ಗೊಳ್ಳುವಿಕೆ ಸಮಿತಿಯಲ್ಲಿ ಕಾಣುತ್ತಿಲ್ಲ. ಎಲ್ಲಾ ಸಮಿತಿಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಸಿಪಿಎಂ ನಿರ್ಧರಿಸಿತ್ತು. ಅನೇಕ ಮಹಿಳೆಯರು ಶಾಖಾ ಕಾರ್ಯದರ್ಶಿ ಮಟ್ಟ ಮತ್ತು ಸ್ಥಳೀಯ ಕಾರ್ಯದರ್ಶಿ ಮಟ್ಟವನ್ನು ತಲುಪಿದರು. ಆದರೆ ಇನ್ನೂ ದೊಡ್ಡ ಬದಲಾವಣೆಗಳ ಅಗತ್ಯವಿದೆ.
           ನಟಿಯಾಗಬೇಕೆಂಬುದು ನನ್ನ ಬಾಲ್ಯದ ಕನಸು ಆಗಿತ್ತೆಂದೂ ಬೃಂಧಾ ಕಾರಟ್ ವಿದ್ಯಾರ್ಥಿಗಳಿಗೆ ತಿಳಿಸಿದರು. ಆದಾಗ್ಯೂ, ವಿಯೆಟ್ನಾಂ ಯುದ್ಧ ಮತ್ತು ಲಂಡನ್‍ನಲ್ಲಿನ ಜೀವನವು ತನ್ನ ಆಲೋಚನೆಯನ್ನು ಬದಲಾಯಿಸಿತು. ಐದು ದಶಕಗಳಿಂದ ಜನರೊಂದಿಗೆ ಮಾಡಿದ ರಾಜಕೀಯ ಕೆಲಸದಿಂದ ನನಗೆ ಸಂಪೂರ್ಣ ತೃಪ್ತಿ ಇದೆ ಎಂದು ಸಿಪಿಎಂ ನಾಯಕಿ  ಹೇಳಿರುವರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries